Advertisement
ಗ್ರಾಪಂ ಚುನಾವಣಾ ಆಕಾಂಕ್ಷಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಈಗಾಗಲೇ ಗ್ರಾಮದ ಎಲ್ಲರ ಮನೆಗೆ ತೆರಳಿ ಒಂದು ಸುತ್ತಿನ ಮತ ಬೇಟೆಯ ಕಸರತ್ತು ನಡೆಸುವ ಮೂಲಕ ಮತದಾರರಿಗೆ ಆಮಿಷಗಳ ಮಹಾಪೂರವನ್ನೇ ಹರಿಸಿದ್ದಾರೆ. ಜೊತೆಗೆಗ್ರಾಮಗಳಲ್ಲಿ ಹೆಚ್ಚು ಮತ ಇರುವಕುಟುಂಬ, ಪ್ರಬಲಸಮುದಾಯಗಳ ಮುಖಂಡರ ಮನೆ ಮುಂದೆ ಪರೇಡ್ ನಡೆಸುತ್ತಿರುವ ಆಕಾಂಕ್ಷಿಗಳು, ಅವರ ಓಲೈಕೆಗೆ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.
Related Articles
Advertisement
ಮೊದಲ ಹಂತ: ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಹಾಗೂ ಸರಗೂರುತಾಲೂಕಿಗೆ ಸೇರಿದ ಗ್ರಾಮ ಪಂಚಾಯಿತಿಗಳ ನಾಮಪತ್ರಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದ್ದು,ಡಿ.11 ಉಮೇದುವಾರಿಕೆ ಸಲ್ಲಿಸಲು ಕಡೆಯದಿನವಾಗಿದೆ. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು 14 ಕಡೆಯ ದಿನವಾಗಿದೆ. ಡಿ. 22ರಂದು ಮತದಾನನಡೆಯಲಿದೆ. ಅಗತ್ಯಬಿದ್ದರೆ 24ರಂದು ಮರು ಮತದಾನ ನಡೆಯಲಿದೆ.
ಎರಡನೇ ಹಂತ: ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎಡರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಡಿ.11ರಿಂದ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆಪ್ರಕ್ರಿಯೆ ಆರಂಭವಾಗಲಿದೆ. ಡಿ.16 ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನ. 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಹಿಂಪಡೆಯಲು 19 ಕಡೆಯ ದಿನವಾಗಿದೆ. 27 ರಂದುಮತದಾನ ನಡೆಯಲಿದೆ. ಅಗತ್ಯಬಿದ್ದರೆ 29ರಂದು ಮರು ಮತದಾನ ನಡೆಯಿದೆ.
ಮದ್ಯದಂಗಡಿಗಳಲ್ಲಿ ನೋ ಸ್ಟಾಕ್ : ಈಗಾಗಲೇ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳಲ್ಲಿಕಡಿಮೆ ಬೆಲೆಯ ಮದ್ಯ ಖಾಲಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಚುನಾವಣಾ ಆಕಾಂಕ್ಷಿಗಳು ಮತದಾರರ ಓಲೈಕೆಗಾಗಿ ಮದ್ಯ ಸಂಗ್ರಹಕ್ಕೆ ಮುಂದಾಗಿರುವುದರಿಂದ ಎಲ್ಲಾ ಕಡೆ ಕಡಿಮೆ ಬೆಲೆಯ ಮದ್ಯ ಸಿಗದಂತಾಗಿದ್ದು, ಮದ್ಯಕ್ಕಾಗಿನಗರ ಪ್ರದೇಶಗಳತ್ತ ಮುಖಮಾಡಿದ್ದಾರೆ.
ಮೊದಲ ಹಂತಕ್ಕೆ ನೀತಿಸಂಹಿತೆ ಜಾರಿ : ರಾಜ್ಯ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಸೋಮವಾರದಿಂದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.