Advertisement

ಗ್ರಾಪಂ ಚುನಾವಣೆ ಮೂರು ಪಕ್ಷಕ್ಕೂ ಪ್ರತಿಷ್ಠೆ

04:32 PM Dec 21, 2020 | Suhan S |

ಬೇಲೂರು: ತಾಲೂಕಿನ 37 ಗ್ರಾಮ ಪಂಚಾಯ್ತಿಯ 423 ಸ್ಥಾನಗಳಲ್ಲಿ 34 ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 387 ಸ್ಥಾನಗಳಿಗೆಡಿ.27ರಂದುಚುನಾವಣೆನಡೆಯಲಿದೆ.ಹುಲುಗುಂಡಿ ಗ್ರಾಪಂನ ವಡ್ಡರ ‌ಹಟ್ಟಿ, ರಾಜನಶಿರಿಯೂರು ಗ್ರಾಪಂನ ನರಸೀಪುರ ಸಾಮಾನ್ಯ ಕ್ಷೇತ್ರಕ್ಕೆ ಯಾವುದೇ ನಾಮಪತ್ರಸಲ್ಲಿಕೆ ಆಗಿಲ್ಲ. ಅದ್ದರಿಂದ 1092 ಅಭ್ಯರ್ಥಿಗಳು ಚುನಾವಣಾಕಣದಲ್ಲಿದ್ದಾರೆ.

Advertisement

ತಾಲೂಕಿನಲ್ಲಿ ಈ ಬಾರಿ ನಡೆಯುತ್ತಿರುವ ಗ್ರಾಮ ಪಂಚಾಯ್ತಿ ಚುನಾವಣೆ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಗೆ ಪ್ರತಿಷ್ಠೆ ಆಗಿದೆ. ಈಗಾಗಲೇ ಮೂರು ಪಕ್ಷದನಾಯಕರು ಪ್ರತಿ ಗ್ರಾಮಕ್ಕೆ ತೆರಳಿ ತಮ್ಮ ಬೆಂಬಲಿತಅಭ್ಯಥಿಗಳ ಪರ ಪ್ರಚಾರ ಆರಂಭಿಸಿದ್ದಾರೆ.ಈಗಾಗಲೇ ಮುಂಬರುವ ವಿಧಾನಸಭೆ  ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌, ಬಿಜೆಪಿಮುಖಂಡರು ತಾಲೂಕಿನಲ್ಲಿ ನಿರಂತರವಾಗಿ ಸಭೆ, ಸಮಾವೇಶ ಹಮ್ಮಿಕೊಂಡು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ

ಈಗಾಗಲೇ ಗ್ರಾಮ ಸ್ವರಾಜ್‌ ಸಮಾವೇಶ ನಡೆಸುವ ಮೂಲಕ ರಾಜ್ಯದ ವಿವಿಧ ಮಂತ್ರಿಗಳನ್ನು ಕರೆಯಿಸಿ, ಸರ್ಕಾರದ ಅಭಿವೃದ್ಧಿ ಬಗ್ಗೆ ಪ್ರಚಾರ ಪಡಿಸಿದೆ.ಅಲ್ಲದೆ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್‌  ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅವರೂ ಗ್ರಾಮೀಣ ಭಾಗದಲ್ಲಿಸಂಚರಿಸಿ ತಮ್ಮ ಪಕ್ಷ ಬೆಂಬಲಿಗರ ಗೆಲುವಿಗೆ ಪಣ ತೊಟ್ಟಿದ್ದಾರೆ.ಜೆಡಿಎಸ್‌ ಸಹ ತನ್ನ ಚುನಾವಣೆ ಪ್ರಚಾರ ಆರಂಭಿಸಿದ್ದು, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ಶಾಸಕ ಕೆ.ಎಸ್‌.ಲಿಂಗೇಶ್‌ ತಮ್ಮ ಪಕ್ಷದಬೆಂಬಲಿಗರ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷ ಸಹ ತಾಲೂಕಿನಲ್ಲಿ ಅತಿ ಹೆಚ್ಚು ಸ್ಥಾನಪಡೆಯುವ ಹಂಬಲದಲ್ಲಿದೆ. ಬೇಲೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ಅಕಾಂಕ್ಷಿ ಎಂದೇ ಬಿಂಬಿತ ಗೊಂಡಿರುವ ಮಾಜಿ ಸಚಿವ ಬಿ. ಶಿವರಾಂ ನೇತೃ ತ್ವದಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬೇಲೂರು ಕ್ಷೇತ್ರದಲ್ಲಿ ತಮ್ಮರಾಜಕೀಯ ಭವಿಷ್ಯ ರೂಪಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ವೇಳೆ ಉದಯವಾಣಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಮೂರೂ ಪಕ್ಷಗಳ ತಾಲೂಕು ಅಧ್ಯಕ್ಷರು ಶೇ.80 ಗ್ರಾಪಂಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಇದುವರೆಗೂ ಬಿಜೆಪಿ ಬೆಂಬಲಿಗರು ಗ್ರಾಮ ಪಂಚಾಯ್ತಿನಲ್ಲಿಹೆಚ್ಚು ಗೆದ್ದಿಲ್ಲ.ಕಳೆದ ಬಾರಿ ಪಕ್ಷದ ಬೆಂಬಲಿತ ರಾಗಿ 120 ಅಭ್ಯರ್ಥಿಗಳುಮಾತ್ರ ಗೆದ್ದಿದ್ದರು ಅದರೆ, ಈ ಸಾರಿ ಶೇ.80 ಅಭ್ಯರ್ಥಿಗಳನ್ನುಗೆಲ್ಲಿಸಲಾಗುವುದು. ರಾಜ್ಯ ಮತ್ತುಕೇಂದ್ರಸರ್ಕಾರದ ಜನಪರ ಅಭಿವೃದ್ಧಿಯನ್ನು ಮತದಾರರ ಮುಂದೆ ಇಡಲಾಗುತ್ತಿದೆ. ಅತಿಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಅಡಗೂರು ಅನಂದ್‌, ತಾಲೂಕು ಅಧ್ಯಕ್ಷ, ಬಿಜೆಪಿ.

Advertisement

ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 37 ಗ್ರಾಮ ಪಂಚಾಯ್ತಿ ಗಳಲ್ಲಿ 30 ಗ್ರಾಪಂ ಜೆಡಿಎಸ್‌ ಬೆಂಬಲಿ ಗರುಕಳೆದ ತಮ್ಮವಶಕ್ಕೆ ಪಡೆದಿದ್ದರು. ಈಬಾರಿ ಹೆಚ್ಚು ಸ್ಥಾನಗಳಿಸುತ್ತೇವೆ. ಮಾಜಿಸಚಿವ ರೇವಣ್ಣ ಅವರು ತಾಲೂಕಿನಲ್ಲಿಮಾಡಿರುವ ಅಭಿವೃದ್ಧಿಯನ್ನು ನೋಡಿ,ಮತದಾರರು ಪಕ್ಷ ಬೆಂಬಲಿತರನ್ನುಗೆಲ್ಲಿಸಲಿದ್ದಾರೆಂಬ ವಿಶ್ವಾಸ ಇದೆ.- ತೊ.ಚ.ಅನಂತಸುಬ್ಟಾರಾಯ, ತಾಲೂಕು ಅಧ್ಯಕ್ಷ, ಜೆಡಿಎಸ್‌

ತಾಲೂಕಿನಲ್ಲಿಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಗ್ರಾಮ ಪಂಚಾಯಿತಿಚುನಾವಣೆ ಎದುರಿಸಲುಸಿದ್ಧವಿದೆ. ಈಗಾಗಲೇ ಮಾಜಿಸಚಿವ ಬಿ.ಶಿವರಾಂ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ವೈ.ಎನ್‌.ಕೃಷ್ಣೇಗೌಡ ಇಬ್ಬರನೇತೃತ್ವದಲ್ಲಿ ತಾಲೂಕಿನಲ್ಲಿಪ್ರವಾಸಕೈಗೊಂಡು ಪಕ್ಷ ಬೆಂಬಲಿತ ಅಭ್ಯರ್ಥಿಗಳಗೆಲುವಿಗೆ ಶ್ರಮಿಸಲಾಗುತ್ತಿದೆ. ಈ ಬಾರಿ ಶೇ.80 ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಎಂ.ಜೆ.ನಿಶಾಂತ್‌, ತಾಲೂಕು ಅಧ್ಯಕ್ಷ, ಕಾಂಗ್ರೆಸ್‌.

 

-ಡಿ.ಬಿ.ಮೋಹನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next