Advertisement

ಗೆದ್ದ ಮತದಾರ : ಗ್ರಾ.ಪಂ.: ಒಟ್ಟು ಶೇ. 80; ಕರಾವಳಿ-ಶೇ. 75 ಮತದಾನ

12:26 AM Dec 23, 2020 | mahesh |

ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆ ಮಂಗಳವಾರ ನಡೆದ ಮೊದಲ ಹಂತದ ಗ್ರಾ.ಪಂ. ಚುನಾವಣೆಗೆ ಮತದಾರರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ. ಒಟ್ಟು ಶೇ. 80ರಷ್ಟು ಮತದಾನವಾಗಿದೆ.

Advertisement

ಮತದಾನದಲ್ಲಿ ಗ್ರಾಮೀಣ ಜನರು ಉತ್ಸಾಹ ತೋರಿಸುತ್ತಾರೆ ಎಂಬುದಕ್ಕೆ ಗ್ರಾ.ಪಂ ಚುನಾವಣೆ ಮತ್ತೂಮ್ಮೆ ಸಾಕ್ಷಿ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ನಿರ್ಬಂಧಗಳಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಮತದಾನದ ವೇಳೆ ಬಹುತೇಕ ಎಲ್ಲ ಕಡೆ ಕೋವಿಡ್‌-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿರುವ ಬಗ್ಗೆ ವರದಿಯಾಗಿದೆ.

ಮೊದಲ ಹಂತದ ಮತದಾನದಲ್ಲಿ ಗ್ರಾಮೀಣ ಜನರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಯಾವುದೇ ದೊಡ್ಡ ಗೊಂದಲಗಳಿಲ್ಲದೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೊರೊನಾ ಭೀತಿ ಅಷ್ಟೊಂದು ಕಂಡು ಬಂದಿಲ್ಲ. ಆದರೆ ಕೋವಿಡ್‌-19 ಮಾರ್ಗಸೂಚಿಗಳನ್ನು ಗರಿಷ್ಠ ಪಾಲಿಸಲಾಗಿದೆ.
– ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ

ಕರಾವಳಿ: ಶೇ. 75ರಷ್ಟು ಮತದಾನ
ಉಡುಪಿ/ ಮಂಗಳೂರು, ಡಿ. 22: ಕರಾವಳಿಯಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯ ಮೊದಲ ಹಂತದಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದರು. ಉಳ್ಳಾಲ ಭಾಗದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯ ಹೊರತಾಗಿ ಮತದಾನ ಶಾಂತಿಯುತವಾಗಿತ್ತು.

ದಕ್ಷಿಣ ಕನ್ನಡ ಶೇ. 75.05
ಉಡುಪಿ ಶೇ. 74.10

Advertisement

ಗರಿಷ್ಠ
ಉಡುಪಿ: ಹೆಬ್ರಿ ತಾಲೂಕು ಶೇ. 79.41
ದ.ಕ.: ಬಂಟ್ವಾಳ ತಾಲೂಕು ಶೇ. 77.77

Advertisement

Udayavani is now on Telegram. Click here to join our channel and stay updated with the latest news.

Next