Advertisement

ಗ್ರಾಮ ಒನ್‌ ರಾಜ್ಯಾದ್ಯಂತ ವಿಸ್ತರಣೆಗೆ ಸಂಪುಟ ಅಸ್ತು

09:13 PM Mar 11, 2022 | Team Udayavani |

ಬೆಂಗಳೂರು: ಕೈಗಾರಿಕೆಗಳಿಗೆ ಜಮೀನು ಸ್ವಾಧೀನಪಡಿಸಿಕೊಂಡರೆ ಹೊಸ ಭೂ ಸ್ವಾಧೀನ ಕಾಯ್ದೆ 2013ರ ಅನ್ವಯ ಭೂ ಮಾಲಕರಿಗೆ ಪರಿಹಾರ ನೀಡುವ ಉದ್ದೇಶದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ ) ವಿಧೇಯಕ-2022ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

ಹೊಸ ಭೂ ಸ್ವಾಧೀನ ಕಾಯ್ದೆ 2013ರ ಅನ್ವಯ ಭೂ ಮಾಲಕರಿಗೆ ಸೂಕ್ತ ಪರಿಹಾರ ನೀಡಲು ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ-1966 ಹಾಗೂ ಭೂ ಸ್ವಾಧೀನ, ಪರಿಹಾರ, ಪುನರ್ವಸತಿ ಕಾಯ್ದೆ-2013ರ ನಡುವೆ ಸಾಮ್ಯತೆ ತರುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

ಹೊಸ ಭೂ ಸ್ವಾಧೀನ ಕಾಯ್ದೆಯನ್ವಯ ಭೂ ಮಾಲಕರಿಗೆ ಪರಿಹಾರ ಪಾವತಿ ಮಾಡಿದಲ್ಲಿ ಯಾವುದೇ ವ್ಯಾಜ್ಯಗಳಿರುವುದಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡು ಪರಿಹಾರದ ಮೊತ್ತವೂ ಹೆಚ್ಚಳವಾಗಲಿದೆ. ಮೂವತ್ತು ದಿನಗಳ ಕಾಲಮಿತಿಯಲ್ಲಿ ಪ್ರಕರಣಗಳ ಇತ್ಯರ್ಥಕ್ಕೂ ಕಾಯ್ದೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.

2013ರಿಂದಲೂ ಬೇಡಿಕೆ ಇದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿಯವರು ಕಾಯ್ದೆ ತಿದ್ದುಪಡಿ ಕುರಿತು ಹಲವು ಸಭೆಗಳಲ್ಲಿ ಪ್ರಸ್ತಾವಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:ಪಾಕಿಸ್ಥಾನಕ್ಕೆ ‘ಆಕಸ್ಮಿಕ’ ಕ್ಷಿಪಣಿ ಉಡಾವಣೆ : ರಕ್ಷಣಾ ಸಚಿವಾಲಯ ವಿಷಾದ

Advertisement

ಗ್ರಾಮ ಒನ್‌ ರಾಜ್ಯಾದ್ಯಂತ ವಿಸ್ತರಣೆ
ಉಳಿದಂತೆ,ಗ್ರಾಮೀಣ ಭಾಗದ ಜನರಿಗೆ ಸರಕಾರಿ ಇಲಾಖೆಗಳ ಸೇವೆ ಒಂದೇ ಸೂರಿನಡಿ ಕಲ್ಪಿಸುವ ಗ್ರಾಮ-1 ಯೋಜನೆ ರಾಜ್ಯದ ಎಲ್ಲ ಗ್ರಾಮಗಳಿಗೆ ವಿಸ್ತರಿಸಲು ಸಂಪುಟ ತೀರ್ಮಾನಿಸಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆ ಜಿಲ್ಲೆ ಹೊನ್ನಳಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಈ ಯೋಜನೆ ರಾಜ್ಯದ ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ.

ಕೃಷಿ ಪಂಪ್‌ಸೆಟ್‌ಗೆ 307.23 ಕೋ.ರೂ.
ಪಿಎಂ ಕುಸುಮ್‌ ಯೋಜನೆಯಡಿ ಸೌರಚಾಲಿತ ಕೃಷಿ ಪಂಪ್‌ಸೆಟ್‌ ಯೋಜನೆ 307.23 ಕೋಟಿ ರೂ. ವೆಚ್ಚದಲ್ಲಿ (ರಾಜ್ಯ ಸರಕಾರದ 106.97 ಕೋಟಿ ರೂ. ಸಹಾಯಧನ ಸೇರಿ)ಅನುಷ್ಟಾನಗೊಳಿಸಲು ಸಂಪುಟ ಅನುಮೋದನೆ ನೀಡಲಾಗಿದೆ.

ಇ ಆಸ್ಪತ್ರೆ ತಂತ್ರಾಂಶವನ್ನು ರಾಜ್ಯದ ಜಿಲ್ಲಾಮಟ್ಟದ ಮೂರು ಆಸ್ಪತ್ರೆ ಹಾಗೂ 157 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಟಾನಗೊಳಿಸಲು ಅಗತ್ಯ ಇರುವ ಐಸಿಟಿ ಸಲಕರಣೆಗಳು ಮತ್ತು 9 ಜಿಲ್ಲಾ ಆಸ್ಪತ್ರೆ ಹಾಗೂ 143 ತಾಲೂಕು ಆಸ್ಪತ್ರೆಗಳಿಗೆ 701 ಡೆಸ್ಕ್ ಟಾಪ್‌ ಕಂಪ್ಯೂಟರ್‌ಗಳನ್ನು 28.55 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next