Advertisement

ಸರಳವಾಗಿ ಜರುಗಿದ ಗ್ರಾಮದೇವತೆ ದುರುಗಮ್ಮದೇವಿ ಜಾತ್ರೆ ಕೆಲವೇ ಜನರಿಂದ ರಥೋತ್ಸವ

07:17 PM Jan 17, 2022 | Team Udayavani |

ಗಂಗಾವತಿ: ಕೊರೊನಾ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ರಥೋತ್ಸವ ಸರಳವಾಗಿ ಕೆಲವೇ ಜನರಿಂದ ಜರುಗಿತು.

Advertisement

ಜಿಲ್ಲಾಡಳಿತ 50 ಜನರಿಗೆ ರಥ ಎಳೆಯಲು ಅವಕಾಶ ಕಲ್ಪಿಸಿ ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಸೂಚನೆ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಿಗ್ಗೆ ದೇಗುಲದಲ್ಲಿ ಅಭಿಷೇಕ ಸೇರಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳ್ಳಿಗ್ಗೆ 9.10 ಕ್ಕೆ ಶ್ರೀದುರುಗಮ್ಮ ದೇವಿಯ ಮಹಾರಥೋತ್ಸವಕ್ಕೆ ಶಾಸಕ ಪರಣ್ಣ ಮುನವಳ್ಳಿ, ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಚಾಲನೆ ನೀಡಿದರು. ರಥದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ರಥವನ್ನು ಐದು ಹೆಜ್ಜೆ ಎಳೆಯಲಾಯಿತು.

ಈ ಸಂದರ್ಭದಲ್ಲಿ ದೇಗುಲ ಕಮಿಟಿಯ ಜೋಗದ ನಾರಾಯಣಪ್ಪ, ಬಿ.ಅಶೋಕ, ಜೋಗದ ಹನುಮಂತಪ್ಪ, ಯು.ಲಕ್ಷ್ಮಣ , ತಾಂದಳೆ ಶ್ರೀನಿವಾಸ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next