Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 10:00 ಗಂಟೆಗೆ ನವಲಗುಂದದಲ್ಲಿ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಬಳಿಕ ನವಲಗುಂದದಿಂದ ಕಣಕುಂಬಿಗೆ ತೆರಳಿ, ಅಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು. ರಾಜ್ಯ ಬಿಜೆಪಿ ನಾಯಕರು ಕೂಡಲೇ ಮಹದಾಯಿ, ಕಳಸಾ-ಬಂಡೂರಿ ಜಾರಿಗೆ ಪ್ರಧಾನಿ ಮೇಲೆ ಮತ್ತೂಮ್ಮೆ ಒತ್ತಡ ಹೇರಬೇಕು. ಫೆ.6 ರೊಳಗೆ ನ್ಯಾಯಾಧೀಕರಣದ ಹೊರಗ ಡೆಯೇ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ರಾಜ್ಯದ ಜನತೆ ಯೊಂದಿಗೆ ಬೀದಿಗಿಳಿದು ಮಾಡು ಇಲ್ಲವೇ ಮಡಿ ಹೋರಾಟ ಮಾಡುವುದು ಎಂದು ಎಚ್ಚರಿಸಿದರು. ಜ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿದ ರಾಜ್ಯ ಬಿಜೆಪಿ ನಾಯಕರು ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಲ್ಲದೆ, ಫೆ.4ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರ ಮನವೊಲಿಸುವ ಬದಲು ಅಡ್ಡಗಾಲು ಹಾಕಿದ್ದಾರೆ. ಬಿಜೆಪಿ ಮೌನ ನೋಡಿದರೆ ಇದು ಅವರದ್ದೇ ಕುಮ್ಮಕ್ಕು ಎನ್ನದೆ ಬೇರೆ ವಿಧಿಯಿಲ್ಲ ಎಂದು ಹೇಳಿದರು.
ಬಿಯರ್‌ಗೆ ಮಹತ್ವ ಕೊಟ್ಟರೆ ನಾವು ನೀರಿಗೆ ಮಹತ್ವ ಕೊಡುತ್ತೇವೆ.
●ಎನ್.ಎಚ್.ಕೋನರೆಡ್ಡಿ, ಜೆಡಿಎಸ್ ಶಾಸಕ