ಕೇಪ್‌ಟೌನ್: ಕೆಲವರು ಹಾಗೆಯೇ, ಸದಾ ಕಾರ್ಯಮಗ್ನರಾಗಿರುತ್ತಾರೆ. ಹಾಗಂತ ಅವರ ವೈಯಕ್ತಿಕ ಜೀವನವನ್ನೂ ಮರೆಯುವಂತಿಲ್ಲ. ಅದನ್ನು ನೆನಪಿಸುವಂತಹ ಘಟನೆಯೊಂದು ದ.ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ದೇಶಕ ಗ್ರೇಮ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ನಡೆದಿದೆ.
ದ.ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿ, ಆಟಗಾರರಾಗಿಯೂ ಹೆಸರು ಮಾಡಿರುವ ಅವರು; ಪ್ರಸ್ತುತ ಕುಸಿದಿರುವ ದ.ಆಫ್ರಿಕಾ ಕ್ರಿಕೆಟನ್ನು ಮೇಲೆತ್ತುವ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ:ಬೇರ್‌ಸ್ಟೊ ಬೇರ್ಪಡಿಸಿದ್ದಕ್ಕೆ ಹುಸೇನ್ ಅಸಮಾಧಾನ
ಸದ್ಯ ದ.ಆಫ್ರಿಕಾ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಪಾಕ್ ಮಟ್ಟಿಗೆ ಇದೊಂದು ಐತಿಹಾಸಿಕ ಪ್ರವಾಸ. ಸತತ ಹತ್ತುವರ್ಷಗಳಿಂದ ಅಲ್ಲಿ ಟೆಸ್ಟ್ ಕ್ರಿಕೆಟ್ ನಡೆದಿರಲಿಲ್ಲ. ಆದ್ದರಿಂದ ಸ್ಮಿತ್ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅವರು ಪಾಕ್ ಮತ್ತು ಆಫ್ರಿಕಾ ಮಹಿಳಾ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ಬಗ್ಗೆ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರ ಪುಟ್ಟ ವಯಸ್ಸಿನ ಮಗ ಮಧ್ಯಪ್ರವೇಶಿಸಿದ. “ಅಪ್ಪಾ ನನ್ನ ಶೂಲೇಸ್ ಕಟ್ಟು’ ಎಂದು ಕೇಳಿಕೊಂಡ. ಆರಂಭದಲ್ಲಿ ಮಗನನ್ನು ಸ್ಮಿತ್ ಕಳುಹಿಸಲು ಯತ್ನಿಸಿದರೂ, ಅದನ್ನು ಆತ ಕೇಳಲಿಲ್ಲ. ಲೇಸ್ ಕಟ್ಟಿದ ಮೇಲೆಯೇ ಆತ ಜಾಗ ಖಾಲಿ ಮಾಡಿದ್ದು.
ಅಪ್ಪ ಅಂತಹ ಪ್ರಮುಖ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂಬ ಅರಿವೂ ಮಗನಿಗಿರಲಿಲ್ಲ. ಬಂದ ಲೇಸ್ ಕಟ್ಟಿಸಿಕೊಂಡು ಓಡಿಹೋದ! ಈ ವಿಡಿಯೊ ಈಗ ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾಗಿದೆ.