Advertisement

ದಕ್ಷಿಣ ಆಫ್ರಿಕಾ ಕ್ರಿಕೆಟಿಗೆ ಗ್ರೇಮ್‌ ಸ್ಮಿತ್‌ ನಿರ್ದೇಶಕ?

10:00 AM Dec 09, 2019 | Team Udayavani |

ಜೊಹಾನ್ಸ್‌ಬರ್ಗ್‌: ಆಂತರಿಕ ಜಗಳದ ಸುಳಿಗೆ ಸಿಕ್ಕಿ ತತ್ತರಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗೆ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ನೆರವಾದಾರೇ ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಸಿಕ್ಕಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಥಬಾಂಗ್‌ ಮೊರೆ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಿದ ಪರಿಣಾಮ ಸ್ಮಿತ್‌, ಮಹತ್ವದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ.

Advertisement

ಥಬಾಂಗ್‌ ಮೊರೆ ಆಡಳಿತ ವೈಖರಿ ವಿರೋಧಿಸಿ ಹಲವರು ಮಂಡಳಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೇಳೆ ಸ್ಮಿತ್‌ ಅವರಲ್ಲಿ ನಿರ್ದೇಶಕನ ಸ್ಥಾನ ವಹಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅವರು ಕೆಲವು ಷರತ್ತುಗಳನ್ನು ಮುಂದಿಟ್ಟು, ಅದನ್ನು ಈಡೇರಿಸುವುದಾದರೆ ಮಾತ್ರ ಜವಾಬ್ದಾರಿ ಹೊತ್ತು ಕೊಳ್ಳುತ್ತೇನೆ ಎಂದಿದ್ದರು. ಅದರಲ್ಲಿ ಮುಖ್ಯವಾಗಿರುವುದು ಥಬಾಂಗ್‌ ಮೊರೊ ಅವರನ್ನು ಕೆಳಗಿಳಿಸುವುದೂ ಒಂದಾಗಿತ್ತು. ಈಗ ಥಬಾಂಗ್‌ ಮೊರೊ ಜಾಗದಲ್ಲಿ ಜಾಕಸ್‌ ಫೌಲ್‌ ಅವರನ್ನು ನೇಮಿಸಲಾಗಿದೆ.

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾ ಈಗ ಪೂರ್ಣ ಕುಸಿದುಹೋಗಿದೆ. ಇದನ್ನು ಮೇಲೆತ್ತುವ ಮಹತ್ವದ ಹೊಣೆ ಸ್ಮಿತ್‌ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next