Advertisement

2022ರ ತನಕ ಗ್ರೇಮ್‌ ಸ್ಮಿತ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ನಿರ್ದೇಶಕ

08:50 PM Apr 17, 2020 | Sriram |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೆ 2022ರ ತನಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Advertisement

ಶುಕ್ರವಾರ ಅವರನ್ನು ನೇಮಕ ಮಾಡಲಾಗಿದ್ದು ಮುಂಬರುವ ಎಪ್ರಿಲ್‌ 2022ಕ್ಕೆ ಅವರ ಕಾರ್ಯಾವಧಿ ಮುಕ್ತಾಯಗೊಳ್ಳಲಿದೆ. ಸ್ಮಿತ್‌ ಈ ಹಿಂದೆ ಹಂಗಾಮಿ ನಿರ್ದೇಶಕರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು. “ಸ್ಮಿತ್‌ ಕಳೆದ 6 ತಿಂಗಳಲ್ಲಿ ತಮ್ಮ ಅನುಭವ, ವೃತ್ತಿಪರತೆ, ಕಠಿನ ಶ್ರಮದಿಂದ ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂದು ಸಿಎಸ್‌ಎ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಜಾಕ್ಸ್‌ ಫೌಲ್‌ ತಿಳಿಸಿದ್ದಾರೆ.
ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರೇಮ್‌ ಸ್ಮಿತ್‌, “ಈ ಆಯ್ಕೆ ನನ್ನ ಮುಂದಿನ ಸವಾಲುಗಳನ್ನು ಪರಿಪೂರ್ಣಗೊಳಿಸಲು ಸಿಕ್ಕಿದ ಅವಕಾಶ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next