Advertisement

ಮಾ. 18, 19: ಫಾ| ಮುಲ್ಲರ್‌ ಚಾರಿಟೆಬಲ್‌ ಇನ್‌ಸ್ಟಿಟ್ಯೂಶನ್‌ಗಳ ಪದವಿ ಪ್ರದಾನ

10:14 AM Mar 14, 2024 | Team Udayavani |

ಮಂಗಳೂರು: ಕಂಕನಾಡಿಯ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಇನ್‌ಸ್ಟಿಟ್ಯೂಶನ್‌ಗಳ ಪದವಿ ಪ್ರಧಾನ ಮಾ. 18 ಹಾಗೂ 19ರಂದು ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಫಾದರ್‌ ಮುಲ್ಲರ್‌ ಸಮೂಹ ಸಂಸ್ಥೆಗಳ ನಿರ್ದೇಶಕ ವಂ| ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೋ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಮಾ. 18ರಂದು 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜು, ಅಲೈಡ್‌ ಹೆಲ್ತ್ ಸೈನ್ಸ್‌, ಫಿಸಿಯೊಥೆರಪಿ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿದ 341 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎ.ವಿ.ಎಸ್‌. ರಮೇಶ್‌ ಚಂದ್ರ, ಹೊಸದಿಲ್ಲಿಯ ಲೇಡಿ ಹಾರ್ಡಿಂಜ್‌ ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ಅಸೋಸಿಯೇಟೆಡ್‌ ಹಾಸ್ಪಿಟಲ್ಸ್‌ ನಿರ್ದೇಶಕ ಸುಭಾಷ್‌ ಗಿರಿ ಭಾಗವಹಿಸಲಿದ್ದಾರೆ. ಮಾ. 18ರಂದು ಬೆಳಗ್ಗೆ 7.30ಕ್ಕೆ ಫಾದರ್‌ ಮುಲ್ಲರ್‌ ಕ್ಯಾಂಪಸ್‌ನಲ್ಲಿರುವ ಸಂತ ಜೋಸೆಫ್‌ ಚಾಪೆಲ್‌ನಲ್ಲಿ ವಿಶೇಷ ಬಲಿಪೂಜೆಯನ್ನು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌ ಸಲ್ಡಾನ್ಹಾ ನಡೆಸಿಕೊಡಲಿದ್ದಾರೆ ಎಂದರು. ‌

ಫಾದರ್‌ ಮುಲ್ಲರ್‌ ಸ್ಕೂಲ್ ಆಫ್‌ ನರ್ಸಿಂಗ್‌, ನರ್ಸಿಂಗ್‌ ಕಾಲೇಜು, ವಾಕ್‌ ಮತ್ತು ಶ್ರವಣ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿದ 232 ವಿದ್ಯಾರ್ಥಿಗಳಿಗೆ ಮಾ. 19ರಂದು 3.30ಕ್ಕೆ ಪದವಿ ಪ್ರದಾನ ಮಾಡಲಾಗುತ್ತದೆ. ಅತಿಥಿಗಳಾಗಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸಿಂಡಿಕೇಟ್‌ ಸದಸ್ಯ ಪ್ರೊ| ಯು.ಟಿ. ಇಫ್ತಿಕರ್‌ ಫರೀದ್‌, ಎ.ವಿ.ಎಸ್‌. ರಮೇಶ್‌ ಚಂದ್ರ ಭಾಗವಹಿಸಲಿದ್ದಾರೆ ಎಂದರು. ‌

ಸ್ಕಿನ್‌ಬ್ಯಾಂಕ್‌ ಉದ್ಘಾಟನೆ: ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯು ರೋಟರಿ ಕ್ಲಬ್ ಸಹಯೋಗದಲ್ಲಿ ಫಾದರ್‌ ಮುಲ್ಲರ್‌ ರೋಟರಿ ಸ್ಕಿನ್‌ (ಚರ್ಮ) ಬ್ಯಾಂಕ್‌ನ್ನು ಮಾ.15ರ ಅಪರಾಹ್ನ 3.30ಕ್ಕೆ ಉದ್ಘಾಟನೆ ಗೊಳ್ಳಲಿದೆ. ಮರಣದ ಬಳಿಕ ಕಣ್ಣಿನಂತೆ ಚರ್ಮವನ್ನು ಕೂಡ ದಾನ ಮಾಡಬಹುದು. ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯು ವವರಿಗೆ ಇದು ಜೀವದಾನ ವಾಗುತ್ತದೆ ಎಂದು ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಉದಯ ಕುಮಾರ್‌ ಹೇಳಿದರು.

ಚರ್ಮ ಬ್ಯಾಂಕ್‌ ಯೋಜನೆಯ ಅಧ್ಯಕ್ಷ ರೋಟರಿ ಕ್ಲಬ್‌ ಮಂಗಳೂರಿನ ಆರ್ಚಿಬಾಲ್ಡ್ ಮಿನೇಜಸ್‌, ರೋಟರಿ ಅಧ್ಯಕ್ಷ ಕಿಶನ್‌ ಕುಮಾರ್‌, ನಿಕಟಪೂರ್ವ ಅಧ್ಯಕ್ಷ ಆರ್‌.ಕೆ. ಭಟ್‌ ಉಪಸ್ಥಿತರಿದ್ದರು.

Advertisement

ತಲಸ್ಸೇಮಿಯಾ ಕೇರ್‌ ಸೆಂಟರ್‌: ತಲಸ್ಸೇಮಿಯಾ ರೋಗಿಗಳಿಗೆ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಸಂಕಲ್ಪ ಇಂಡಿಯಾ ಫೌಂಡೇಶನ್‌ ಸಹಯೋಗದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ತಿಂಗಳಿನಿಂದ 150 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ. 21ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಮಕ್ಕಳ ತಜ್ಞೆ ಡಾ| ಚೇತನಾ ಪೈ ಹೇಳಿದರು.

ಮಕ್ಕಳ ತಜ್ಞ ಡಾ| ಶ್ರೀಧರ್‌ ಅವಭೃತ ಹಾಗೂ ಬ್ಲಿಡ್‌ ಬ್ಯಾಂಕ್‌ನ ಮುಖ್ಯಸ್ಥ ಡಾ| ಕಿರಣ್‌, ಸಂಸ್ಥೆಯ ವಂ| ಅಜಿತ್‌ ಬಿ. ಮಿನೇಜಸ್‌, ವಂ| ಸಿಲ್ವೆಸ್ಟರ್‌ ವಿನ್ಸೆಂಟ್‌ ಲೋಬೋ, ವಂ| ಜಾರ್ಜ್‌ ಜೀವನ್‌ ಸಿಕ್ವೇರಾ, ಫಾ| ನೆಲ್ಸನ್‌  ಧೀರಜ್‌ ಪಾಯಸ್‌, ಡೀನ್‌ ಡಾ| ಆ್ಯಂಟನಿ ಸಿಲ್ವಾನ್‌ ಡಿಸೋಜ, ಅಲೈಡ್‌ ಹೆಲ್ತ್ ಸೈನ್ಸ್‌ ಕಾಲೇಜಿನ ಪ್ರಾಂಶುಪಾಲರಾದ ಹಿಲ್ಡಾ ಡಿ’ಸೋಜಾ ಮತ್ತು ಫಿಸಿಯೊಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಚೆರಿಷ್ಮಾ ಡಿಸಿಲ್ವ, ಎಫ್‌ಎಂಎಸ್‌ಒಎನ್‌ ಮತ್ತು ಎಫ್‌ ಎಂಸಿಒಎನ್‌ ಪ್ರಾಂಶುಪಾಲರಾದ ಭ| ಜೆಸಿಂತಾ ಡಿ’ಸೋಜಾ, ಎಫ್‌ಎಂಸಿಯ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಪ್ರಿನ್ಸಿಪಾಲ್‌ ಸಿಂಥಿಯಾ ಸಾಂತುಮಾಯರ್‌, ಪಿಆರ್‌ಒ ಕೆಲ್ವಿನ್‌ ಪಾಯಸ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next