Advertisement
ಮಾ. 18ರಂದು 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸ್, ಫಿಸಿಯೊಥೆರಪಿ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿದ 341 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎ.ವಿ.ಎಸ್. ರಮೇಶ್ ಚಂದ್ರ, ಹೊಸದಿಲ್ಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜ್ ಆ್ಯಂಡ್ ಅಸೋಸಿಯೇಟೆಡ್ ಹಾಸ್ಪಿಟಲ್ಸ್ ನಿರ್ದೇಶಕ ಸುಭಾಷ್ ಗಿರಿ ಭಾಗವಹಿಸಲಿದ್ದಾರೆ. ಮಾ. 18ರಂದು ಬೆಳಗ್ಗೆ 7.30ಕ್ಕೆ ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿರುವ ಸಂತ ಜೋಸೆಫ್ ಚಾಪೆಲ್‌ನಲ್ಲಿ ವಿಶೇಷ ಬಲಿಪೂಜೆಯನ್ನು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ ಸಲ್ಡಾನ್ಹಾ ನಡೆಸಿಕೊಡಲಿದ್ದಾರೆ ಎಂದರು.
Related Articles
Advertisement
ತಲಸ್ಸೇಮಿಯಾ ಕೇರ್ ಸೆಂಟರ್: ತಲಸ್ಸೇಮಿಯಾ ರೋಗಿಗಳಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಂಕಲ್ಪ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ತಿಂಗಳಿನಿಂದ 150 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ. 21ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಮಕ್ಕಳ ತಜ್ಞೆ ಡಾ| ಚೇತನಾ ಪೈ ಹೇಳಿದರು.
ಮಕ್ಕಳ ತಜ್ಞ ಡಾ| ಶ್ರೀಧರ್ ಅವಭೃತ ಹಾಗೂ ಬ್ಲಿಡ್ ಬ್ಯಾಂಕ್‌ನ ಮುಖ್ಯಸ್ಥ ಡಾ| ಕಿರಣ್, ಸಂಸ್ಥೆಯ ವಂ| ಅಜಿತ್ ಬಿ. ಮಿನೇಜಸ್, ವಂ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ವಂ| ಜಾರ್ಜ್ ಜೀವನ್ ಸಿಕ್ವೇರಾ, ಫಾ| ನೆಲ್ಸನ್ ಧೀರಜ್ ಪಾಯಸ್, ಡೀನ್ ಡಾ| ಆ್ಯಂಟನಿ ಸಿಲ್ವಾನ್ ಡಿಸೋಜ, ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಹಿಲ್ಡಾ ಡಿ’ಸೋಜಾ ಮತ್ತು ಫಿಸಿಯೊಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಚೆರಿಷ್ಮಾ ಡಿಸಿಲ್ವ, ಎಫ್‌ಎಂಎಸ್‌ಒಎನ್ ಮತ್ತು ಎಫ್ ಎಂಸಿಒಎನ್ ಪ್ರಾಂಶುಪಾಲರಾದ ಭ| ಜೆಸಿಂತಾ ಡಿ’ಸೋಜಾ, ಎಫ್‌ಎಂಸಿಯ ಸ್ಪೀಚ್ ಆ್ಯಂಡ್ ಹಿಯರಿಂಗ್ ಪ್ರಿನ್ಸಿಪಾಲ್ ಸಿಂಥಿಯಾ ಸಾಂತುಮಾಯರ್, ಪಿಆರ್‌ಒ ಕೆಲ್ವಿನ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿದ್ದರು.