ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿವಿಯಲ್ಲಿ ಬುಧವಾರ ನಡೆದ 11ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು, ತಂದೆ-ತಾಯಿ ಹಾಗೂ ವಾರಿಗೆಯ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು.
ಎಂಎಸ್ಸಿ ತೋಟಗಾರಿಕೆ ವಿಜ್ಞಾನದ ವಿವಿಧ ವಿಭಾಗದಲ್ಲಿ ಗಾಯತ್ರಿ ಆರ್., ಕಾವಿಯಾ ವಿ., ಮೋಹನರಾಜ್, ಟೀನಾ ಆರ್.ಗೆ ತಲಾ ಒಂದು, ಎಂ.ಆನಂದ, ಕಾರ್ತಿಕ ಜಿ.ಯು., ಸಿಂಧು ಪಿ.ಎಂಗೆ ತಲಾ 2, ಪರಿಣಿತ ಡಿ., ಸಹನಾ ಅಶೋಕ ಸವದಿ, ಸೂರ್ಯ ಲಕ್ಷ್ಮೀ ತಲಾ ಮೂರು ಚಿನ್ನದ ಪದಕ ಪಡೆದರು.
ಇನ್ನು ಬಿಎಸ್ಸಿ ತೋಟಗಾರಿಕೆ ವಿಜ್ಞಾನದಲ್ಲಿ ಅಪೂರ್ವಾ ಚಿ. ಗದಗ, ಭೀಮಸಿಂಗ್ ರಜಪೂತ, ಭುವನೇಶ್ವರಿ, ಜೋಷ°ದುರ್ಗ ಎನ್., ಲಕ್ಷ್ಮೀ ಕೆಂಗನಾಳ, ಎನ್. ನಿಧಿ ರೈತ, ಸಂಪದ ಆರ್., ಶೇಷ ಸಾಯಿ ಕೆ., ಸ್ನೇಹಾ ಹನಮಂತ ಪಾಟೀಲ, ಸೌರಭ ಕಲ್ಯಾಣಿ, ಉಮಾ ಪಟೇಲ್ ತಲಾ ಒಂದು, ಶ್ರಾವ್ಯ ಡಿ. ಪಾಟೀಲ, ಸುಹಾಸ್ ಟಿ. ತಲಾ ಎರಡು ಚಿನ್ನದ ಪದಕ ಪಡೆದರೆ, ಅರುಣ ಕುಂಬಾರ, ಚಂದನ ಅಶ್ವತ್ಥಪ್ಪ ಬಿ. ತಲಾ ಮೂರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಸುಹಾನ್ ಭೀಮಯ್ಯ ಬಿ., ಮಹೇಶ ವಿ.ಎನ್ ನಾಲ್ಕು ಚಿನ್ನದ ಪದಕ ಪಡೆದು, 2ನೇ ಅತಿ ಹೆಚ್ಚು ಚಿನ್ನದ ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾರು. ಬಿಎಸ್ಸಿಯಲ್ಲಿ ಉಮ್ಮೆಸಾರಾ ಹಸ್ಮತ್ ಅಲಿ 16 ಚಿನ್ನದ ಪದಕ, ತೋಟಗಾರಿಕೆ ಹಣ್ಣು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಮೇಘಾ ಅರುಣ ಒಟ್ಟು ನಾಲ್ಕು ಚಿನ್ನದ ಪದಕ ಪಡೆದು ವಿವಿಯಲ್ಲಿ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದರು.
ತೋಟಗಾರಿಕೆ ವಿವಿ ಆರಂಭಗೊಂಡು 12 ವರ್ಷ ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ನೀಡುವ ಪರಂಪರೆ ಆರಂಭಿಸಲಾಯಿತು. ಚಿತ್ರದುರ್ಗದ ಮಾಜಿ ಸಚಿವ, ಪ್ರಗತಿಪರ ರೈತ ಎಚ್. ಏಕಾಂತಯ್ಯ ವಿವಿ ಪ್ರಥಮ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದರು. ಅಲ್ಲದೇ ಹರ್ಷಿತ ಎಸ್.ಬಿ., ಕೀರ್ತಿಶಂಕರ ಕೆ. ಪಿಎಚ್‌ಡಿಯಲ್ಲಿ ತಲಾ ಒಂದು ಚಿನ್ನದ ಪದಕ, ರವಿ ಜಿ.ಕೆ. ಎರಡು ಹಾಗೂ ಅನುಷಾ ರಮೇಶ ಭಾಗವತ್ ಪಿ.ಎಚ್‌ಡಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದರು. ಒಟ್ಟು 680 ವಿದ್ಯಾರ್ಥಿಗಳಲ್ಲಿ 475 ಸ್ನಾತಕ (ತೋಟಗಾರಿಕೆ), 23 ಬಿ.ಟೆಕ್ (ಆಹಾರ ತಂತ್ರಜ್ಞಾನ), 137 ಜನ ಸ್ನಾತಕೋತ್ತರ (ತೋಟಗಾರಿಕೆ), 45 ಜನರಿಗೆ ಪಿ.ಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಒಟ್ಟು ಅಂಕಗಳ ಆಧಾರದ ಮೇಲೆ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಯಿಂದ 25 ಹಾಗೂ ದಾನಿಗಳು ನೀಡಿದ 52 ಸೇರಿ ಒಟ್ಟು 77 ಚಿನ್ನದ ಪದಕ ಪ್ರದಾನ ಮಾಡಲಾಯಿತು.
ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಹ ಕುಲಾಧಿಪತಿಯೂ ಆಗಿರುವ ತೋಟಗಾರಿಕೆ ಸಚಿವ ವಿ. ಮುನಿರತ್ನ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.