Advertisement
ಯಾವಾಗಜ.31ರಂದು ಹಂಗಳೂರಿನ ಸೈಂಟ್ ಪಿಯುಸ್ ಚರ್ಚ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.
ಪದವಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಎಲ್ಲ ವಿದ್ಯಾರ್ಥಿಗಳಿಗೆ ಅಂಗನ ವಾಡಿ ಪದವಿ ಪೂರೈಸಿದ ಪ್ರಮಾಣಪತ್ರಗಳನ್ನು ವಿತರಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದ ಕುರಿತು
ಅನಿಸಿಕೆ ವ್ಯಕ್ತಪಡಿಸುತ್ತಾರೆ. ಈ ವರ್ಷ ಅಂಗನವಾಡಿಯಲ್ಲಿ ನಡೆದ ಚಟುವಟಿಕೆಗಳ ವರದಿ ವಾಚಿಸ ಲಾಗುತ್ತದೆ. ಅಂಗನವಾಡಿಯ ಆಹಾರ,ಕಾರ್ಯ
ಕರ್ತೆಯ ವೇತನ ಸರಕಾರದಿಂದ ನೀಡಿದರೂ ಇತರ ಚಟುವಟಿಕೆಗೆ ದಾನಿಗಳ ಅಗತ್ಯ ಇರುತ್ತದೆ. ಹಾಗೆ ದಾನಿಗಳಾದವರಿಗೆ ವಂದನೆ ಸಲ್ಲಿಸಲಾಗುತ್ತದೆ. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ.
Related Articles
ಎರಡೋ, ಮೂರೋ ವರ್ಷಗಳ ಅಂಗನವಾಡಿ ಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಾಲೆಗೆ 1ನೇ ತರಗತಿ ಸೇರ್ಪಡೆಗಾಗಿ ಬೀಳ್ಕೊಡಲಾಗುತ್ತದೆ. ಹಾಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ ತಾನೇನೋ ಮಹತ್ತರವಾದುದನ್ನು ಕಲಿತು, ಇನ್ನಷ್ಟು ಕಲಿಯಲು ತೆರಳುತ್ತಿದ್ದೇನೆ ಎಂಬ ಭಾವ ಮೂಡಿಸುವುದು, ಉತ್ಸಾಹ ಹೆಚ್ಚಿಸುವುದು, ಕಲಿಕಾ ಪೂರ್ಣ ಅವಧಿಯಲ್ಲಿ ಉಲ್ಲಾಸ ಇರುವಂತೆ ಮಾಡುವುದು ಇದರ ಹಿಂದಿನ ಮೂಲ ಉದ್ದೇಶ. ಅಷ್ಟಲ್ಲದೇ ಸರಕಾರಿ ಅಂಗನವಾಡಿಗೆ ಆಗಮಿಸಿದ ಮಕ್ಕಳು ಆಂಗ್ಲಭಾಷಾ ಶಿಕ್ಷಣದ ಪ್ರಿ ನರ್ಸರಿ, ನರ್ಸರಿಗೆ ಹೋಗದವರು. ಅಂತಹ ಮಕ್ಕಳಿಗಿಂತ ಅಂಗನವಾಡಿ ಮಕ್ಕಳೂ ಕಡಿಮೆಯೇನಲ್ಲ ಎಂದು ಭಾವ ಬರುವಂತೆ ಮಾಡುವುದು ಕೂಡಾ ಕಾರ್ಯಕ್ರಮದ ಉದ್ದೇಶಗಳ ಪೈಕಿ ಒಂದು. ಅಷ್ಟೇ ಅಲ್ಲದೇ ಆಂಗ್ಲ ಭಾಷಾ ಶಾಲೆಗಳ ಸಂಖ್ಯೆ ಹೆಚ್ಚಾದಂತೆ, ಆಕರ್ಷಣೆ ಜಾಸ್ತಿಯಾದಂತೆ ಅಂಗನವಾಡಿಗಳ ಕಡೆಗೆ ಮಕ್ಕಳನ್ನು ಕರೆತರುವ ಪೋಷಕರ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಅಂಗನವಾಡಿ ಶಿಕ್ಷಣದಲ್ಲಿ, ಸರಕಾರಿ ಅಂಗನವಾಡಿಗಳಲ್ಲಿ ಆಸಕ್ತಿ ಮೂಡಿಸುವುದು, ದಾಖಲಾತಿ ಸಂಖ್ಯೆ ಹೆಚ್ಚಿಸುವ ಕಳಕಳಿಯೂ ಇದೆ. ಬಸೂÅರು ವಲಯದಲ್ಲಿ ಈಗಾಗಲೇ 10 ಅಂಗನವಾಡಿಗಳಲ್ಲಿ ಆಂಗ್ಲಭಾಷಾ ಕಲಿಕೆಯನ್ನೂ ಆರಂಭಿಸಲಾಗಿದೆ.
Advertisement
ವಲಯಕುಂದಾಪುರದಲ್ಲಿ 412 ಅಂಗನವಾಡಿಗಳಿದ್ದು 17 ವಲಯಗಳಿವೆ. ಬಸ್ರೂರು ವಲಯದಲ್ಲಿ 25 ಅಂಗನವಾಡಿಗಳವೆ. ಬಸ್ರೂರು ವಲಯದ ಆಯ್ದ 9 ಅಂಗನವಾಡಿಗಳು ಒಟ್ಟಾಗಿ ಹಂಗಳೂರಿನಲ್ಲಿ ಪದವಿ ಪ್ರದಾನ ಸಮಾರಂಭ ನಡೆಸುತ್ತಿವೆ. ಕಳೆದ ವರ್ಷ ಕೋಣಿ ಗ್ರಾಮದ ಕಟೆRರೆ ಅಂಗನವಾಡಿಯಲ್ಲಿ ಪ್ರಾಯೋಗಿಕವಾಗಿ ಪದವಿ ಪ್ರದಾನ ಸಮಾರಂಭ ನಡೆದಿತ್ತು. ಈ ಬಾರಿ 9 ಅಂಗನವಾಡಿಗಳನ್ನು ಒಟ್ಟಾಗಿಸಿ ಸಮಾರಂಭ ಮಾಡಲಾಗುತ್ತಿದೆ. ಉನ್ನತ ಸ್ಥಾನಮಾನ
ಸಣ್ಣ ಮಕ್ಕಳ ಮನಸ್ಸಿನಲ್ಲಿ ದೊಡ್ಡ ದೊಡ್ಡ ಆಸೆಗಳನ್ನು ಹುಟ್ಟಿಸಿ ಅವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಂತಾಗಬೇಕೆಂದು ಭಾವಿಸುವಂತೆ ಮಾಡಬೇಕು. ಹಾಗೆ ಸ್ಥಾನಮಾನಗಳನ್ನು ಪಡೆಯಲು ಆಂಗ್ಲ ಮಾಧ್ಯಮ ಶಾಲೆಗಳಷ್ಟೇ ಆಯ್ಕೆ ಎಂದು ಮಕ್ಕಳಾಗಲೀ, ಪೋಷಕರಾಗಲೀ ಭಾವಿಸಕೂಡದು. ಸರಕಾರದ ಅಂಗನವಾಡಿಗಳಲ್ಲೂ ಸೌಲಭ್ಯ, ಸೌಕರ್ಯಗಳು, ಆಕರ್ಷಣೆಗಳು ಇವೆ ಎಂದು ತಿಳಿಯಬೇಕು. ಅದಕ್ಕಾಗಿ ಮಕ್ಕಳಿಗಾಗಿ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.
– ಭಾಗ್ಯವತಿ, ಬಸ್ರೂರು ವಲಯ ಮೇಲ್ವಿಚಾರಕಿ