ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಂಟು ಸಾವಿರ ಪದವಿ ತರಗತಿ ಕೊಠಡಿಗಳನ್ನು “ಸ್ಮಾರ್ಟ್‌ಕ್ಲಾಸ್ ರೂಂ’ಆಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರು ವಾರ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿಮಾತನಾಡಿದರು. ಬದಲಾದ ಕಾಲಮಾನದಲ್ಲಿ ಪದವಿ ತರಗತಿಗಳಲ್ಲಿ ಸ್ಮಾರ್ಟ್‌ಕಲಿಕೆ ಅತ್ಯಗತ್ಯವಾಗಿದೆ. ಹೀಗಾಗಿ, ರಾಜ್ಯದ ಎಲ್ಲಾ ಪದವಿ ಕಾಲೇಜುಗಳನ್ನು ಸಂಪೂರ್ಣ ಸ್ಮಾರ್ಟ್‌ಕ್ಲಾಸ್ ರೂಂ ಅಳವಡಿಸ ಲಾಗುತ್ತಿದೆ. ಒಟ್ಟು ಸಾವಿರ ತರಗತಿ ಕೊಠಡಿ ಗಳಿದ್ದು, ಮುಂದಿನ ಆರು ತಿಂಗಳಲ್ಲಿ ಅವುಗಳನ್ನು ಸ್ಮಾರ್ಟ್‌ಕ್ಲಾಸ್ ರೂಂ ಮಾಡಲಾಗುತ್ತದೆ. ಏಪ್ರಿಲ್ ಅಂತ್ಯಕ್ಕೆ ಎರಡೂವರೆ ಸಾವಿರ ಕೊಠಡಿಗಳಲ್ಲಿ ಸ್ಮಾರ್ಟ್‌ಕ್ಲಾಸ್ ಇರಲಿದೆ ಎಂದರು.
ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನಲ್ಲಿಯೇ ಹೆಮ್ಮೆಯ ಸಂಸ್ಥೆ. ಅನೇಕ ದಿಗ್ಗಜರನ್ನು ಕೊಟ್ಟ ಸಂಸ್ಥೆಯೂ ಹೌದು. ಇದೆಲ್ಲ ಗಮನದಲ್ಲಿ ಇಟ್ಟುಕೊಂಡು ಈ ಕಾಲೇಜನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಷ್ಟೇ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ, ಜಿಮ್ ಆರಂಭವಾಗಿದೆ. ಇದು ವಿದ್ಯಾರ್ಥಿಗಳ ಆರೋಗ್ಯ ಹಾಗೂ ಮನೋಸ್ಥೈರ್ಯಕ್ಕೆ ಹೆಚ್ಚು ಪೂರಕವಾಗುತ್ತದೆ. ಜತೆಗೆ, ಸಮಾಜವನ್ನು ವಿದ್ಯಾರ್ಥಿ ಗಳು ನೇರವಾಗಿ ನೋಡಿ ಕಲಿಯಬೇಕು. ನಮ್ಮ ಆಚಾರ, ವಿಚಾರ, ಸಂಸ್ಕೃತಿ ಸೇರಿದಂತೆ ಸಮಾಜ ದಲ್ಲಿ ಏನೆಲ್ಲ ಒಳ್ಳೆಯದು ಇದೆಯೋ ಅದೆಲ್ಲವನ್ನು ಖುಷಿಯಾಗಿ ಕಂಡು ವಿದ್ಯಾರ್ಥಿಗಳು ಕಲಿಯಬೇಕು. ಮಾನಸಿಕವಾಗಿ, ದೈಹಿಕವಾಗಿ ಸದೃಢತೆ ಸಾಧಿಸ ಬೇಕಾದರೆ ಇದೆಲ್ಲವೂ ಮುಖ್ಯ ಎಂದರು.
ಇದನ್ನೂ ಓದಿ:ಇಂಡಿಯನ್ ಬ್ಯಾಂಕ್ ಸಂಯೋಜನೆ ಪೂರ್ಣ
ಶ್ರಮವಿಲ್ಲದೆ ಫಲವಿಲ್ಲ: ಇತ್ತೀಚಿನ ಕೆಲ ವಿದ್ಯಾರ್ಥಿಗಳಲ್ಲಿ ಹೇಗೊ ಪದವಿ ಪಡೆಯುತ್ತೇವೆ. ಭಗ ವಂತನ ದಯೆಯಿದೆ ಎಂಬ ಕಲ್ಪನೆಗಳಿವೆ. ಇಂತಹ ಮನಸ್ಥಿತಿ ಯಿಂದ ಹೊರಬನ್ನಿ. ಶ್ರಮವಿಲ್ಲದೆ ಫಲ ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ಕಲಿಕೆಯಲ್ಲಿ ನಿರತರಾಗಿ, ಈ ವೇಳೆಯಲ್ಲಿ ತೋರುವ ನಿಲ್ಯìಕ್ಷ್ಯ ತಮಗೆ ತಾವೇ ಮಾಡಿಕೊಳ್ಳುವ ಅನ್ಯಾಯ. ಸದ್ಯ ಎಲ್ಲಾ ಮಾಹಿತಿ ಬೆರಳ ತುದಿಯÇÉೇ ಸಿಗುತ್ತಿದ್ದು, ಅದನ್ನು ಬಳಸಿಕೊಳ್ಳಿ, ಆಗ ಉದ್ಯೋಗ ಅರಸಿ ಬರುತ್ತದೆ ಎಂದರು. ಅತಿಕ್ರಮಕ್ಕೆ ಅವಕಾಶ ನೀಡದಿರಿ: ಮಾಜಿ ಉಪಸಭಾಪತಿ ಪುಟ್ಟಣ್ಣ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿರುವ ಪ್ರಮುಖ ಸರ್ಕಾರಿ ಕಾಲೇಜುಗಳು ಬಡವರ ಪಾಲಿಗೆ ವಿದ್ಯಾದೀಪಗಳಾಗಿವೆ. ಇವುಗಳನ್ನ ಅತಿಕ್ರಮಿಸಲು ಸರ್ಕಾರದ ವಿವಿಧ ಇಲಾಖೆಗಳು ಕಾಯುತ್ತಿವೆ. ಅದಕ್ಕೆ ಅವಕಾಶ ನೀಡಬಾರದು. ಮೆಟ್ರೋಗೆ ಈಗಾಗಲೇ ಸರ್ಕಾರಿ ಕಲಾ ಕಾಲೇಜು ಜಾಗ ನೀಡಲಾಗಿದೆ. ಅವರಿಂದ ಪರಿಹಾರ ಹಣ ವಸೂಲಿ ಮಾಡಿ ಕಾಲೇಜು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ದೈಹಿಕವಾಗಿ ಫಿಟ್ ಆಗಿ: ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಯುವಕರು ನಿತ್ಯ ಒಂದು ಗಂಟೆ ದೈಹಿಕ ಚುಟುವಟಿಕೆಯಲ್ಲಿ ತೊಡಗಿಕೊಳ್ಳ ಬೇಕು. ಇದು ನಿಮ್ಮನ್ನು ಫಿಟ್ ಆಗಿಸುತ್ತದೆ. ಉತ್ತಮ ಜ್ಞಾನದ ಜತೆಗೆ ಆರೋಗ್ಯ ದೃಷ್ಟಿಯಿಂದ ದೈಹಿಕವಾಗಿಯು ಸದೃಢ ಇರುವುದು ಮುಖ್ಯ. ಈ ನಿಟ್ಟಿ ನಲ್ಲಿ ಕಾಲೇಜಿನಲ್ಲಿರುವ ಜಿಮ್ ಬಳಸಿಕೊಳ್ಳಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಕಾಲೇಜು ವಸತಿ ನಿಲಯಕ್ಕೆ ಮನವಿ . ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಕಾಲೇಜು ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾಲೇಜು ಪ್ರಾಂಶುಪಾಲ ಪ್ರೊ. ಕೋಡದ ರಾಜಶೇಖರಪ್ಪ ಸೇರಿದಂತೆ ಪ್ರಾಧ್ಯಾ ಪಕರು, ಸಿಬ್ಬಂದಿ ವರ್ಗ ಹಾಜರಿದ್ದರು.