ಕಾಸರಗೋಡು: ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಜಾಗೃತಿ ಮೂಡಿದಾಗ ನಾಡಿನಲ್ಲಿ ಶಾಂತಿ, ಸಮೃದ್ಧಿ ಸೃಷ್ಟಿಯಾಗುತ್ತದೆ. ದೇವರ ಕೆಲಸದಲ್ಲಿ ತೊಡಗಿಕೊಂಡಾಗ ಹೃದಯ ಪರಿಶುದ್ಧಗೊಂಡು ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಅವರು ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿದರು.
ಒಗ್ಗಟ್ಟಿನಿಂದ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ, ಯಾಗ, ಭಜನೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ಮೂಲಕ ಊರು ಸಮೃದ್ಧಿಯಾಗುತ್ತದೆ. ಮುಂದಿನ ಭವಿಷ್ಯವಾಗಿರುವ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ಇಂದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಾತೆಯರ ಪಾತ್ರ ಪ್ರಮುಖವಾಗಿದೆ. ದೇವರ ಕೆಲಸ ಕಾರ್ಯಗಳಲ್ಲಿ ನಿಸ್ವಾರ್ಥದಿಂದ ದುಡಿದರೆ ಭಗವಂತನ ಅನುಗ್ರಹ ಲಭಿಸುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ ಎಂದು ನುಡಿದ ಸ್ವಾಮೀಜಿಯವರು ದೇವಸ್ಥಾನಗಳು ಅಧಿವೃದ್ಧಿಯಾದಂತೆ ನಮ್ಮ ನಾಡು ಅಭಿವೃದ್ಧಿಯಾಗುತ್ತದೆ ಎಂದರು.
ಶ್ರೇಷ್ಠ ಸಂಸ್ಕೃತಿ ಭಾರತದ್ದು : ಇಡೀ ಜಗತ್ತಿಗೇ ಒಳ್ಳೆಯತನವನ್ನು, ಶ್ರೇಷ್ಠ ಸಂಸ್ಕಾರವನ್ನು ನೀಡಿದ ಏಕೈಕ ದೇಶ ಭಾರತ. ಆದರೆ ಯಾರು ಈ ದೇಶದ ಆಕ್ರಮಣ ಮಾಡಿದ್ರೋ ಅವರನ್ನೇ ಓಲೈಸುವ, ಭಾರತೀಯರೆಂದು ಕರೆಯುವ ದು:ಸ್ಥಿತಿ ನಮಗೊದಗಿ ಬಂತು. ಅಣು ರೇಣ ತೃಣಕಾಷ್ಟದಲ್ಲಿ ಭಗವಂತನ ಸಾನ್ನಿಧ್ಯವನ್ನು ಕಾಣುವ ಶ್ನೆàಷ್ಠ ಸಂಸ್ಕೃತಿ ಭಾರತದ್ದು. ಇದು ಶ್ರೀ ಕೃಷ್ಣ ನೀಡಿದ ಗೀತಾ ಸಂದೇಶ. ಕ್ಷೇತ್ರದ ಜೀರ್ಣೋದ್ಧಾರದಿಂದ ಸಮಾಜದ ಉನ್ನತಿಯ ಕಡೆ ನಮ್ಮ ಶ್ರದ್ಧೆ ಹರಿಯಬೇಕಾಗಿದೆ. ದೇವರೊಂದಿಗಿನ ಸಂಭಾಷಣೆಯೇ ಭಕ್ತಿ ಎಂದೆನಿಸಿದ್ದು, ಇದು ಧರ್ಮಶ್ರದ್ಧೆಗೆ ಪೂರಕವಾಗಿದೆ. ಧರ್ಮ ಜಾಗೃತಿಯಲ್ಲಿ ಬ್ರಹ್ಮಕಲಶೋತ್ಸವ ನೆರವಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸರ್ವೋತ್ತಮ ಕಾಮತ್ ಅಧ್ಯಕ್ಷತೆ ವಹಿಸಿದರು. ಡಾ|ಪ್ರಿಯದರ್ಶನ್‌ಲಾಲ್ ಮುಖ್ಯ ಭಾಷಣ ಮಾಡಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷೆ ಮೀರಾ ಕಾಮತ್, ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ರಾವ್ ಧರೇಕರ್, ಹಿರಿಯ ನ್ಯಾಯವಾದಿ ಅಡೂರು ಉಮೇಶ್ ನಾೖಕ್, ಕೋಟೆಕಣಿ ಶ್ರೀರಾಮನಾಥ ದೇವಸ್ಥಾನದ ಗೌರವಾಧ್ಯಕ್ಷ ಗಣಪತಿ ಕೋಟೆಕಣಿ, ಉದ್ಯಮಿ ಬಾಬೂಜಿ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ನ್ಯಾಯವಾದಿ ಬಿ.ಕರುಣಾಕರನ್, ಕೀಯೂರು ಶ್ರೀ ಧರ್ಮಶಾಸ್ತಾ ಕ್ಷೇತ್ರ ನವೀಕರಣ ಸಮಿತಿ ಸಂಚಾಲಕ ನ್ಯಾಯವಾದಿ ಬಾಲಕೃಷ್ಣನ್ ನಾಯರ್, ಅಮೈ ಶ್ರೀಕೃಷ್ಣ ಭಜನಾ ಮಂದಿರ ಅಧ್ಯಕ್ಷ ದೇವಪ್ಪ, ಕಾಸರಗೋಡು ನಗರಸಭೆ ಸದಸ್ಯ ಕೆ.ಶಂಕರ ಮೊದಲಾದವರು ಉಪಸ್ಥಿತರಿದ್ದರು.
ರಜನಿ, ಆದ್ಯ, ಪ್ರಶಾಂತಿ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಅಣಂಗೂರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎ.ಕೇಶವ ವಂದಿಸಿದರು. ಜತೆ ಕಾರ್ಯದರ್ಶಿ ಶ್ರೀನಿವಾಸನ್ ಕಾರ್ಯಕ್ರಮ ನಿರೂಪಿಸಿದರು.
ಪೂರ್ಣಕುಂಭ ಸ್ವಾಗತ
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರಿಗೆ ೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಅದ್ಭುತ ಶಾಂತಿ ಹೋಮ : ಮಾ.10 ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಚೋರ ಶಾಂತಿ ಹೋಮ, ಸ್ವಶಾಂತಿ ಹೋಮ, ಶ್ವಾನ ಶಾಂತಿ ಹೋಮ, ಖನನಾದಿ ಸಪ್ತಶುದ್ಧಿ, ಅದ್ಭುತ ಶಾಂತಿ ಹೋಮ, ಹೋಮ ಕಲಶಾಭಿಷೇಕ, ವಿವಿಧ ಭಜನಾ ಮಂಡಳಿ ಗಳಿಂದ ಭಜನೆ, ಶಾಸ್ತಿÅàಯ ಸಂಗೀತ, ಯೋಗ ಪ್ರದರ್ಶನ, ಕೀಬೋರ್ಡ್ ಸಂಗೀತ ಸುಧಾ, ಧಾರ್ಮಿಕ ಸಭೆ, ರಾತ್ರಿ ನಾಟ್ಯ ನಡೆಯಿತು.
ಇಂದಿನ ಕಾರ್ಯಕ್ರಮ
ಬೆಳಗ್ಗೆ 6 ರಿಂದ ಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ಸೃಷ್ಟಿ ತತ್ವ ಕಲಶ ಪೂಜೆ, ಸೃಷ್ಟಿ ತತ್ವಹೋಮ, ಅನುಜ್ಞಾ ಕಲಶ ಪೂಜೆ, ಸೃಷ್ಟಿ ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 1.30 ಕ್ಕೆ ಮಧ್ಯಾಹ್ನ ಪೂಜೆ, ರಾತ್ರಿ 7 ರಿಂದ ಶಯ್ನಾ ಮಂಟಪ ಸಂಸ್ಕಾರ, ಬ್ರಹ್ಮಕಲಶ, ಧ್ವಜ ಪ್ರತಿಷ್ಠೆಗೆ ಅಂಕುರಾರ್ಪಣೆ, ತ್ರಿಕಾಲ ಪೂಜೆ, ಅಂಕುರ ಪೂಜೆ, ಸಂಜೆ ಧಾರ್ಮಿಕ ಸಭೆ, ರಾತ್ರಿ ನೃತ್ಯ ವೈಭವ ಯೋಗ ಪ್ರದರ್ಶನನೃತ್ಯಧಾರೆ ನಡೆಯಲಿದೆ.