Advertisement

ಎಚ್‌1ಬಿ ವೀಸಾದಾರರ ಗ್ರೇಸ್‌ ಅವಧಿ ವಿಸ್ತರಣೆಗೆ ಶಿಫಾರಸು

11:05 PM Mar 15, 2023 | Team Udayavani |

ವಾಷಿಂಗ್ಟನ್‌:ಟೆಕ್‌ ಕಂಪನಿಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತದಂಥ ಆಘಾತಕಾರಿ ಸುದ್ದಿಯ ನಡುವೆಯೇ ಸಮಾಧಾನಕರ ಸುದ್ದಿಯೊಂದು ಬಂದಿದೆ.

Advertisement

ಎಚ್‌-1ಬಿ ವೀಸಾ ಹೊಂದಿರುವ ಸಾವಿರಾರು ಮಂದಿಯ ಗ್ರೇಸ್‌ ಅವಧಿಯನ್ನು ಪ್ರಸ್ತುತ ಇರುವ 60 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷೀಯ ಉಪಸಮಿತಿ ಶಿಫಾರಸು ಮಾಡಿದೆ.
ಇದಕ್ಕೆ ಸಮ್ಮತಿ ಸಿಕ್ಕಿದರೆ, ಅಮೆರಿಕದಲ್ಲಿರುವ ಭಾರತೀಯರೂ ಸೇರಿದಂತೆ ಎಚ್‌1ಬಿ ವೀಸಾದಾರರಿಗೆ ಹೊಸ ಉದ್ಯೋಗ ಹುಡುಕಲು ಅಥವಾ ಪರ್ಯಾಯ ದಾರಿ ಕಂಡುಕೊಳ್ಳಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ.

ಇತ್ತೀಚೆಗೆ ಹಲವು ಕಂಪನಿಗಳು ಉದ್ಯೋಗ ಕಡಿತ ಘೋಷಿಸಿದ್ದರಿಂದ, ಉನ್ನತ ಕೌಶಲ್ಯವಿರುವ ಸಾವಿರಾರು ವಿದೇಶಿಯರು ಉದ್ಯೋಗ ಕಳೆದುಕೊಂಡಿದ್ದು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಕೆಲಸ ಕಳೆದುಕೊಂಡ ಮೇಲೆ 60 ದಿನಗಳಷ್ಟೇ ಅಮೆರಿಕದಲ್ಲಿ ಉಳಿಯಲು ಅವಕಾಶವಿರುವ ಕಾರಣ, ಅನೇಕರು ಆ ಅವಧಿಯೊಳಗೆ ಉದ್ಯೋಗ ಸಿಗದ ಕಾರಣ ಸ್ವದೇಶಕ್ಕೆ ಮರಳುತ್ತಿದ್ದಾರೆ. ಈಗ ಈ ಅವಧಿಯನ್ನು 180ಕ್ಕೇರಿಸಲು ವಲಸೆ ಉಪಸಮಿತಿ ಶಿಫಾರಸು ಮಾಡಿರುವ ಕಾರಣ, ಇಂಥ ಉದ್ಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next