Advertisement

‘ಮುದ್ರಾಧಾರಣೆಯಿಂದ ಭಗವಂತನ ಅನುಗ್ರಹ’

12:15 PM Jul 25, 2018 | |

ಬೆಳ್ತಂಗಡಿ : ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಉತ್ಥಾನ ದ್ವಾದಶಿವರೆಗೆ ಧಾರ್ಮಿಕ ಕಾರ್ಯ, ಆಚರಣೆಯಲ್ಲಿ ತೊಡಗಿದರೆ ವಿಶೇಷ ಫಲ ಸಿಗುತ್ತದೆ. ಈ ಸಂದರ್ಭ ಭಗವಂತನ ಚಿಹ್ನೆಗಳಾದ ಚಕ್ರ, ಶಂಖದಲ್ಲಿ ಸುದರ್ಶನ ಮಂತ್ರ ಪೂರಿತ ಹವನದ ಮೂಲಕ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ಭಗವಂತನ ಅನುಗ್ರಹ ಲಭಿಸು ತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಭಕ್ತರಿಗೆ ಮುದ್ರಾ ಧಾರಣೆ ಮಾಡಿ ಅದರ ಮಹತ್ವವನ್ನು ವಿವರಿಸಿದರು. ಚಾತುರ್ಮಾಸ್ಯದ ಸಮಯ ಎಲ್ಲ ಜೀವರಾಶಿಗಳಿಗೂ ಸಂತಾನೋತ್ಪತ್ತಿಯ ಕಾಲವಾಗಿದ್ದು, ಈ ಅವಧಿಯಲ್ಲಿ ಸಂತರು ಸಂಚಾರ ಮಾಡದೆ ಒಂದು ಕಡೆ ಪೂಜೆ, ತಪಸ್ಸು ನಡೆಸುತ್ತಾರೆ. ಮುದ್ರಾಧಾರಣೆಯನ್ನು ಯಾವತ್ತೂ ಮಾಡಬಹುದಾಗಿದ್ದು, ಯತಿಗಳಿಗೆ ಮಾತ್ರ ಇದರ ಅಧಿಕಾರವಿರುತ್ತದೆ ಎಂದು ತಿಳಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಶ್ರೀಗಳನ್ನು ಗೌರವಿಸಿದರು. ವೇ| ಮೂ| ಶ್ರೀಪತಿ ಎಳಚಿತ್ತಾಯ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ 500ಕ್ಕೂ ಹೆಚ್ಚು ಭಕ್ತರಿಗೆ ಮುದ್ರಾಧಾರಣೆ ಮಾಡಲಾಯಿತು. ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಅವರು ತನ್ನ 22ನೇ ವರ್ಷದ ಚಾತುರ್ಮಾಸ್ಯ ವ್ರತವನ್ನು ಆ. 7ರಿಂದ ಸೆ. 25ರ ವರೆಗೆ ಸುಬ್ರಹ್ಮಣ್ಯದ ಮೂಲ ಮಠದಲ್ಲಿ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next