Advertisement

ಸಹಜ ಸ್ಥಿತಿಗೆ ಬರಲು ಹರ ಸಾಹಸ`

03:17 PM May 08, 2020 | mahesh |

ಮಹಾಮಾರಿ ಕೋವಿಡ್‌-19 ಸೋಂಕಿನಿಂದ ಹೆಚ್ಚು ಬಾಧಿತವಾಗಿರುವ‌ ಯೂರೋಝೋನ್‌ನ ಹಲವು ದೇಶಗಳು ಲಾಕ್‌ಡೌನ್‌ ಸಡಿಲಿಕೆಗೆ ಮನಸ್ಸು ಮಾಡಿವೆ. ಈಗಾಗಲೇ ಕೆಲ ರಾಷ್ಟ್ರಗಳು ವಿನಾಯಿತಿ ನೀಡಿದ್ದರೆ, ಇನ್ನು ಕೆಲವೆಡೆ ಚರ್ಚೆ ನಡೆದಿದೆ. ಆದರೆ, ಸೋಂಕು ಮತ್ತು ಸಾವಿನ ಪ್ರಕರಣಗಳು ದಿನವೂ ಏರುತ್ತಿದ್ದು ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

Advertisement

ಮಣಿಪಾಲ: ಸಹಜ ಸ್ಥಿತಿಗೆ ಬರಲು ಯುಕೆಯ ರಾಷ್ಟ್ರಗಳು ಬಹಳ ಕಷ್ಟ ಪಡುತ್ತಿವೆ ಎಂಬುದು ಜಾಗತಿಕ ನೆಲೆಯಲ್ಲಿ ಸಿಗುತ್ತಿರುವ ಮಾಹಿತಿ. ನಿಯಮ ಸಡಿಲಿಕೆ ಯಾದರೂ ಜನರೇ ಹೊರಬರುತ್ತಿಲ್ಲ ಎಂದು ವರದಿ ಮಾಡಿದೆ ಸಿಎನ್‌ಎನ್‌.

ಇಳಿಯದ ಸೋಂಕಿನ ಕಾವು ?
ಅತೀ ಹೆಚ್ಚು ಸಾವು ನೋವನ್ನು ಅನುಭವಿಸಿದ ಅಮೆರಿಕದ ಅನಂತರ 2ನೇ ಸ್ಥಾನದಲ್ಲಿ ಇಟಲಿ ಗುರುತಿಸಿ ಕೊಂಡಿದ್ದು, ಎರಡು ತಿಂಗ ಳಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ ಕ್ರಮೇಣ ಸಡಿಲಿಕೆಯಾಗುತ್ತಿದೆ. ಜನರು ಪಾರ್ಕ್‌ ಗಳಲ್ಲಿ ಓಡಾಡಲು ಹಾಗೂ ಸಂಬಂಧಿಕರನ್ನು ಭೇಟಿ ಮಾಡಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದ್ದು, ಗ್ರಾಹಕರು ಆಹಾರ ಸಾಮಗ್ರಿಗಳನ್ನು ಪಾರ್ಸೆಲ್‌ ಒಯ್ಯಬಹುದಾಗಿದೆ. ಹೊಟೇಲ್‌ನಲ್ಲಿ ಕುಳಿತು ತಿನ್ನುವಂತಿಲ್ಲ. ಸಗಟು ವ್ಯಾಪಾರ ಅಂಗಡಿಗಳು ಕೂಡ ವ್ಯವಹಾರ ನಡೆಸಬಹುದಾಗಿದೆ. ಮನೆಯಲ್ಲಿಯೇ ಉಳಿದಿದ್ದ 4 ದಶಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಪುನ: ಕೆಲಸಕ್ಕೆ ಮರಳುವ ನಿರೀಕ್ಷೆಯಿದ್ದು, ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೈಗಾರಿಕ ಘಟಕಗಳು, ಉತ್ಪಾದನ ಕೇಂದ್ರಗಳು ತೆರೆದಿವೆ. ಆದರೆ ಇದರ ಬೆನ್ನಿಗೇ ಕೆಲ ಜನರು ಸೋಂಕಿಗೆ ಹೆದರಿ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಸ್ಪಂದಿಸಿದ ಗ್ರಾಹಕರು
2 ತಿಂಗಳ ನಂತರ ದೇಶದ ಬಾರ್‌, ರೆಸ್ಟೋರೆಂಟ್‌ ಮತ್ತು ಹೊಟೇಲ್‌ಗ‌ಳು ತೆರೆದಿವೆ. ಆದರೆ ಗ್ರಾಹಕರು ಸಂಖ್ಯೆ ಕಡಿಮೆಯಾಗಿದೆ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಹಲವರು ಅಂಗಡಿ ತೆರೆದಿದ್ದಾರೆ. ಆದರೆ ಗ್ರಾಹಕರು ಹೋಗು ತ್ತಿಲ್ಲ. ಒಟ್ಟು ವ್ಯಾಪಾರದ ಶೇ. 30 ರಷ್ಟೂ ವಹಿವಾಟು ಆಗುತ್ತಿಲ್ಲ ಎಂಬುದು ಸ್ಥಳೀಯ ಉದ್ಯಮಿ. ನನ್ನ ಅಂಗಡಿಯಲ್ಲಿ ಇತರೆ 14 ಮಂದಿ ಕೆಲಸಗಾರರು ಇದ್ದಾರೆ, ಪರಿಸ್ಥಿತಿ ಹೀಗೆ ಮುಂದುವರೆದ್ದರೆ ಸೋಂಕು ಬಗೆಹರಿದ ಬೆನ್ನಲ್ಲೇ ಆರ್ಥಿಕವಾಗಿ ಮತ್ತೂಂದು ಸಂಕಷ್ಟಕ್ಕೆ ತುತ್ತಾಗುತ್ತೇವೆ ಎಂಬುದು ಉದ್ಯಮಿಯ ಅಳಲು.

ಸಲೂನ್‌ಗಳು
ವಾರಗಟ್ಟಲೇಯಿಂದ ಸ್ಥಗಿತಗೊಂಡಿದ್ದ ಜರ್ಮನ್‌ ಕೂಡ ಲಾಕ್‌ಡೌನ್‌ ತೆರವುಗೊಳಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಲೂನ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಸೋಂಕು ಹರಡುವಿಕೆ ನಿಯಂತ್ರಣ ಸಲುವಾಗಿ ಕೆಲ ನಿಯಮಗಳನ್ನು ಈ ಉದ್ಯಮದ ಮೇಲೆ ವಿಧಿಸಿದ್ದು, ಗ್ರಾಹಕರು ಮುಂಗಡ ವಾಗಿಯೇ ಮಾಲಕರ ಬಳಿ ಆಪಾಯಿಂಟ್‌ಮೆಂಟ್‌ ಕಾದಿರಿಸಬೇಕು. ಹಿಂದಿಗಿಂತ ಸದ್ಯ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದ್ದು, ನಿಯಂತ್ರಣವೇ ಕಷ್ಟವಾಗುತ್ತಿದೆ. ಸಾಮಾಜಿಕ ಅಂತರ ನಿಯಮ ಕಡ್ಡಾಯವಾಗಿದ್ದು, ಗ್ರಾಹಕರು ಪಾಲಿಸದಿದ್ದರೆ ದಂಡ ತೆರಬೇಕಾದೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next