Advertisement

Chemical ಬಾಂಬ್‌ ತಯಾರಿ ಬಗ್ಗೆ ಬಾಯಿ ಬಿಟ್ಟ ಚಾಟ್‌ ಜಿಪಿಟಿ!

12:21 AM Sep 17, 2024 | Team Udayavani |

ಹೊಸದಿಲ್ಲಿ: ಎಐಗಳು (ಕೃತಕ ಬುದ್ಧಿಮತ್ತೆ) ಹೇಗೆ ಅಪಾಯಕಾರಿಯಾಗಬಲ್ಲವು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಓಪನ್‌ ಎಐ ಸಂಸ್ಥೆಯ ಚಾಟ್‌ ಜಿಪಿಟಿಯನ್ನು ವಂಚಿಸಿ, ಅದರಿಂದ ಮನೆಯಲ್ಲೇ ಬಾಂಬ್‌ ತಯಾರಿಸುವುದು ಹೇಗೆಂಬ ಆಘಾತಕಾರಿ ಮಾಹಿತಿಯನ್ನು “ಅಮದಾನ್‌’ ಎಂದು ಗುರುತಿಸಿ ಕೊಂಡಿರುವ ಹ್ಯಾಕರ್‌ ಒಬ್ಬರು ಪಡೆದುಕೊಂಡಿದ್ದಾರೆ. ಇದನ್ನು ಓಪನ್‌ ಎಐ ಗಮನಕ್ಕೂ ತಂದಿದ್ದಾರೆ. ಬಾಂಬ್‌ ತಯಾರಿಸುವುದು ಹೇಗೆಂದು ನೇರವಾಗಿ ಕೇಳಿದರೆ, ಇದು ತನ್ನ ಸುರûಾ ನಿಯಮಗಳಿಗೆ ವಿರುದ್ಧ ಎಂದು ಚಾಟ್‌ ಬಾಟ್‌ ಉತ್ತರಿಸುತ್ತದೆ. ಬದಲಿಗೆ ಕಾಲ್ಪನಿಕ ವಿಜ್ಞಾನ ಲೋಕವನ್ನು ಸೃಷ್ಟಿಸುವ ಆಟ ಆಡೋಣ ಎಂದರೆ ಜಿಪಿಟಿ ಮಾಹಿತಿ ನೀಡುತ್ತದೆ. ಸುರಕ್ಷ ನಿಯಮಗಳು ದುರ್ಬಲವಾಗಿರುವುದೇ ಇದಕ್ಕೆ ಕಾರಣ ಎಂದು ಅಮದಾನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next