ಹಾರಾಟದ ಸಮಯದಲ್ಲಿ ದಿಢೀರನೆ ಜಿಪಿಎಸ್ ಸಿಗ್ನಲ್ ಸ್ಥಗಿತಗೊಳ್ಳುವ ಕಾರಣ, ಪೈಲಟ್‌ಗಳು ಗೊಂದಲದಲ್ಲೇ ವಿಮಾನವನ್ನು ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Advertisement
ಇದು ದೊಡ್ಡಮಟ್ಟದ ಅಪಾಯಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಡಿಜಿಸಿಎ ಸಂದೇಶ ರವಾನಿಸಿದೆ. ಪ್ರಾದೇಶಿಕ ಸಂಘರ್ಷವಿರುವಂಥ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸೇನಾ ಎಲೆಕ್ಟ್ರಾನಿಕ್ ಯುದ್ಧ ಸಾಧನಗಳೇ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.