Advertisement

GPS ಆಧರಿತ ಟೋಲ್‌: 10000 ಕೋಟಿ ಲಾಭ…? ಸಚಿವ ನಿತಿನ್‌ ಗಡ್ಕರಿ ಹೇಳಿದ್ದೇನು?

09:24 AM Jun 27, 2024 | Team Udayavani |

ಹೊಸದಿಲ್ಲಿ: ಉಪಗ್ರಹ ಆಧಾರಿತ ಟೋಲ್‌ ಸಂಗ್ರಹದಿಂದ ಹೆದ್ದಾರಿ ಪ್ರಾಧಿಕಾರಕ್ಕೆ 10 ಸಾವಿರ ಕೋಟಿ ರೂ. ಲಾಭವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಜಿಪಿಎಸ್‌ ಆಧಾರಿತ ಟೋಲಿಂಗ್‌ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ದೇಶಾದ್ಯಂತ ವರ್ಷಾಂತ್ಯದಲ್ಲಿ ಗ್ಲೋಬಲ್‌ ನ್ಯಾವಿಗೇಶನ್‌ ಸೆಟಲೈಟ್‌ ಸಿಸ್ಟಮ್‌ (ಜಿಎನ್‌ಎಸ್‌ಎಸ್‌) ಜಾರಿಗೊಳ್ಳಲಿದೆ. ಇದರಿಂದ ಪ್ರಾಧಿಕಾರಕ್ಕೆ ದಾಖಲೆಯ ಪ್ರಮಾಣದಲ್ಲಿ ಟೋಲ್‌ ಸಂಗ್ರಹವಾಗಲಿದೆ ಎಂದು ತಿಳಿಸಿದ್ದಾರೆ.

ಏನಿದು ಜಿಎನ್‌ಎಸ್‌ಎಸ್‌?: ಜಿಎನ್‌ಎಸ್‌ಎಸ್‌ ವ್ಯವಸ್ಥೆಯಲ್ಲಿ ವಾಹನಗಳಿಗೆ ಜಿಪಿಎಸ್‌ ಯಂತ್ರ ಅಳವಡಿಸಲಾಗಿರುತ್ತದೆ. ಉಪಗ್ರಹದೊಂದಿಗೆ ಸಂಪರ್ಕ ಹೊಂದುವ ಜಿಪಿಎಸ್‌ ಯಂತ್ರಗಳು ವಾಹನ ಯಾವ ಟೋಲ್‌ನಿಂದ ಹೆದ್ದಾರಿಗೆ ಪ್ರವೇಶಿಸಿದೆ ಹಾಗೂ ಎಲ್ಲಿಂದ ನಿರ್ಗಮಿಸಿದೆ ಎಂಬುದನ್ನು ದಾಖಲಿಸುತ್ತದೆ. ಅದರನುಸಾರ ನೇರವಾಗಿ ಬ್ಯಾಂಕ್‌ ಖಾತೆಯಿಂದ ಟೋಲ್‌ ಕಡಿತ ವಾಗುತ್ತದೆ. ಈ ಮೊದಲು ಟೋಲ್‌ ದಾಟಿ ಸ್ವಲ್ಪ ದೂರ ಹೋದರೂ ಪೂರ್ತಿ ಹಣ ನೀಡಬೇಕಾಗಿತ್ತು. ನೂತನ ವ್ಯವಸ್ಥೆಯಿಂದ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next