Advertisement

ತರಬೇತಿಗೆ 2 ತಿಂಗಳ ಹಸುಗೂಸುವಿನೊಂದಿಗೆ ಬಂದ ಗ್ರಾಪಂ ಸದಸ್ಯೆ!

07:13 PM Feb 25, 2021 | Team Udayavani |

ಬಂಗಾರಪೇಟೆ: ಸರ್ಕಾರಿ ಸಭೆಗಳಿಗೇ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವುದೇ ಕಷ್ಟ. ಅಂತಹ ದ್ದರಲ್ಲಿ ಸುಮಾರು 45 ಕಿ.ಮೀ. ದೂರದ ತಮಿಳುನಾಡು ಗಡಿಯ ಹಳ್ಳಿಯೊಂದರ ಗ್ರಾಪಂ ಸದಸ್ಯೆ ತನ್ನ 2 ತಿಂಗಳ ಹಸುಗೂಸಿನೊಂದಿಗೆ ತರಬೇತಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.

Advertisement

ಹೌದು, ಪಟ್ಟಣದ ತಾಪಂ ಸಭಾಂಗಣದಲ್ಲಿ ಮೈಸೂರಿನ ನಜೀರ್‌ ಸಾಬ್‌ ತರಬೇತಿ ಸಂಸ್ಥೆಯ ಮೂಲಕ ತಾಲೂಕಿನ 21 ಗ್ರಾಪಂಗಳ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ 5 ದಿನ ತರಬೇತಿ ನಡೆಯಲಿದ್ದು ಮೂರು ದಿನ ಮುಕ್ತಾಯವಾಗಿದೆ.

ತಾಪಂನಿಂದ ಸಕಲ ವ್ಯವಸ್ಥೆ: ತಮಿಳುನಾಡು ನಾಡಿನ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಬಲ ಮಂದೆ ಗ್ರಾಪಂ ಸದಸ್ಯೆಯಾಗಿ ಹೊಸದಾಗಿ ಆಯ್ಕೆಯಾಗಿರುವ ಕನಮನಹಳ್ಳಿಯ ಸಂಧ್ಯಾಬಾಯಿ ಹಸುಗೂಸು ವಿನೊಂದಿಗೆ ಕಳೆದ ಮೂರು ದಿನಗಳಿಂದಲೂ ತರಬೇತಿ ಯಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಪತಿ ಮನ್ನೋಜಿ ರಾವ್‌ ನಿತ್ಯ 45 ಕಿ.ಮೀ.ದೂರದಿಂದ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬರುತ್ತಾರೆ. ಇನ್ನೂ ಎರಡು ದಿನ ತರಬೇತಿ ನಡೆಯಲಿದೆ. ಬೆಳಗ್ಗೆ 10ರಿಂದ 4ರವರೆಗೂ ತರಬೇತಿ ನಡೆಯಲಿದ್ದು ಊಟದ ವ್ಯವಸ್ಥೆಯನ್ನು ತಾಪಂನಿಂದಲೇ ಮಾಡಲಾಗಿದೆ.

ತರಬೇತಿಯಲ್ಲಿ ಅಚ್ಚರಿ: ವಿವಿಧ ಸರ್ಕಾರಿ ಇಲಾಖೆ ಗಳಲ್ಲಿ ಅಧಿಕಾರಿ ಸಿಬ್ಬಂದಿ ಈ ರೀತಿ ಗರ್ಭಿಣಿಯಾದರೆ 9 ತಿಂಗಳು ರಜೆ ಘೋಷಣೆ ಮಾಡುವ ಪದ್ಧತಿಯಿದೆ. ರಾಜಕಾರಣಿಗಳು ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಯಾವುದೇ ರಜೆಯಾ ಗಲೀ ಅಥವಾ ವಿಶ್ರಾಂತಿಯಾಗಲಿ ಇರಲ್ಲ. ಆದರೆ, ಇಂತಹ ಪರಿಸ್ಥಿತಿಯಲ್ಲಿ 2ತಿಂಗಳ ಮಗುವಿನೊಂದಿಗೆ ಬಾಣಂತಿ ಸದಸ್ಯೆ ತರಬೇತಿಗೆ ಹಾಜರಾಗಿದ್ದು ಶಿಬಿರದಲ್ಲಿ ಅಚ್ಚರಿ ಮೂಡಿಸಿದೆ. ಪಂಚಾಯತ್‌ ರಾಜ್‌ ಇಲಾಖೆ ಯಲ್ಲಿನ ವಿವಿಧ ಯೋಜನೆಗಳ ವಿವರ ಸೇರಿ ಸ್ಥಳೀಯ ಸಂಸ್ಥೆಗಳ ಆಡಳಿತದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು 2 ತಿಂಗಳ ಕೂಸಿನೊಂದಿಗೆ ತರಬೇತಿ ಶಿಬಿರಕ್ಕೆ ಆಗ ಮಿಸಿದ್ದು ಕಾರ್ಯಕ್ರಮಗಳಿಗೆ ಗೈರಾಗುವ ಅಧಿಕಾರಿ ಗಳು, ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

  • ಎಂ.ಸಿ.ಮಂಜುನಾಥ್
Advertisement

Udayavani is now on Telegram. Click here to join our channel and stay updated with the latest news.

Next