Advertisement

ಗೌರಿ ಹತ್ಯೆ ಪ್ರಕರಣ: ತನಿಖಾ ತಂಡಕ್ಕೆ 25ಲಕ್ಷ

02:34 AM May 28, 2019 | Sriram |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) 25 ಲಕ್ಷ ರೂ. ನಗದು ಬಹುಮಾನ ಮಂಜೂರು ಮಾಡಿ ರಾಜ್ಯಸರ್ಕಾರ ಆದೇಶಿಸಿದೆ.

Advertisement

ಗೌರಿ ಲಂಕೇಶ್‌ ಅವರನ್ನು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ನ ಅವರ ನಿವಾಸದ ಮುಂದೆಯೇ ಅಪರಿಚಿತ ದುಷ್ಕರ್ಮಿಗಳು 2017ರ ಸೆಪ್ಟೆಂಬರ್‌ 5ರಂದು ರಾತ್ರಿ ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ಐಪಿಎಸ್‌ ಅಧಿಕಾರಿ ಎಂ.ಎನ್‌ ಅನುಚೇತ್‌ ತನಿಖಾಧಿಕಾರಿಯಾಗಿ, ಹಿರಿಯ ಪೊಲೀಸ್‌ ಅಧಿಕಾರಿಗಳನ್ನೊಳಗೊಂಡು 91 ಮಂದಿಯ ವಿಶೇಷ ತನಿಖಾ ತಂಡ ರಚನೆಯಾಗಿತ್ತು.

ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದ ತನಿಖಾ ತಂಡ 16 ಮಂದಿ ಆರೋಪಿಗಳನ್ನು ಬಂಧಿಸಿತ್ತು. ಆರೋಪಿಗಳ ವಿರುದ್ಧ 2018ರ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿದ್ದ ಅಂದಿನ ಗೃಹ ಸಚಿವ ಡಾ. ಜಿ ಪರಮೇಶ್ವರ, 25 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next