Advertisement

ದುನಿಯಾ ವಿಜಿಗೆ ಕೀರ್ತಿ ಗೌಡ 5ನೇ ಪತ್ನಿ! ಮೊದಲ ಪತ್ನಿ ನಾಗರತ್ನ

01:29 PM Oct 02, 2018 | Sharanya Alva |

ಬೆಂಗಳೂರು: ಚಿನ್ನದ ಮೊಟ್ಟೆ ಇಡೋ ಕೋಳಿ ನೋಡ್ಕೊಂಡು ನಾನು ಬಂದಿಲ್ಲ. ಅದನ್ನು ನೋಡಿ ಬಂದವರು ಇನ್ನೊಬ್ಬರು. ನನಗೆ ಆ ಮಾತನ್ನು ಹೇಳುವುದು ಬೇಡ. ತಂದೆ, ತಾಯಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸೋದು ಬೇಡ. ನನ್ನ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ..ವರ್ಷಕ್ಕೆ ಒಂದೊಂದು ಮದುವೆಯಾಗೋದು ಯಾವ ನ್ಯಾಯ ಹೇಳಿ..ಇದು ನಟ ದುನಿಯಾ ವಿಜಿ ವಿರುದ್ಧ ಮೊದಲ ಪತ್ನಿ ನಾಗರತ್ನ ನಡೆಸಿದ ವಾಗ್ದಾಳಿಯ ಪರಿ!

Advertisement

ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 70ನೇ ಸೆಷನ್ಸ್ ಕೋರ್ಟ್ ದುನಿಯಾ ವಿಜಯ್ ಸೇರಿದಂತೆ ನಾಲ್ವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ವಿಜಿ ಬಿಡುಗಡೆಗೊಂಡ ಬಳಿಕ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಬಗ್ಗೆ ಹಾಗೂ ಮೊದಲ ಪತ್ನಿ ನಾಗರತ್ನ ವಿರುದ್ಧ ಆರೋಪಿಸಿದ್ದರು.

ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಜಿ ಮೊದಲ ಪತ್ನಿ ನಾಗರತ್ನ, ಅತ್ತೆ, ಮಾವನನ್ನು ನೋಡಿಕೊಳ್ಳಲಿಲ್ಲ ಎಂಬುದೆಲ್ಲಾ ಸುಳ್ಳು. ಅಲ್ಲದೇ ಕೀರ್ತಿ ಗೌಡ ವಿಜಿಯ 2ನೇ ಪತ್ನಿ ಅಲ್ಲ. ಕೀರ್ತಿ ಗೌಡ ವಿಜಿಯ 5ನೇ ಪತ್ನಿ ಎಂಬುದಾಗಿ ಗಂಭೀರವಾಗಿ ಆರೋಪಿಸಿದ್ದಾರೆ.

ಕೀರ್ತಿ ಗೌಡ ಅವರನ್ನು ವಿಜಿ ಮದುವೆಯೇ ಆಗಿಲ್ಲ. ನನ್ನ ಮದುವೆ ಆಗುವ ಮೊದಲೇ ವಿಜಿಗೆ ಮತ್ತೊಂದು ಮದುವೆ ಆಗಿತ್ತು. ನಂತರ ಶುಭ ಪೂಂಜಾ ಬಂದರು, ಅದರ ನಂತರ ಜಯಮ್ಮನ ಮಗ ಸಿನಿಮಾದ ಹೀರೋಯಿನ್ ಭಾರತಿ..ಈಗ ಕೀರ್ತಿ ಗೌಡ..ಹೀಗೆ ವರ್ಷಕ್ಕೆ ಒಂದೊಂದು ಮದುವೆ ಆಗೋದು ವಿಜಿಗೆ ಕರಗತವಾಗಿದೆ ಎಂದು ವ್ಯಂಗ್ಯವಾಡಿದರು.

Advertisement

ಕೀರ್ತಿಗೌಡ ಬಂದ ಮೇಲೆ ವಿಜಿಯ ಯಾವ ಸಿನಿಮಾ ಹಿಟ್ ಆಗಿದೆ. ಕೀರ್ತಿ ಗೌಡಗಾಗಿ ವಿಜಿ ಇಷ್ಟೆಲ್ಲಾ ಕಥೆ ಹೆಣೆಯುತ್ತಿದ್ದಾರೆ. ನನ್ನ ಜೊತೆ ಯಾವ ಒಡಂಬಡಿಕೆಯೂ ಮಾಡಿಕೊಂಡಿಲ್ಲ. ನಾನು ಯಾವ ಕಾರಣಕ್ಕೂ ಡೈವೋರ್ಸ್ ನೀಡಲ್ಲ. ನಾನು ಕೂಡಾ ಸಂಸಾರ ನಡೆಸಲು  ಬಂದವಳು ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next