Advertisement
ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಎ. ಮಂಜು ಅರಸೀಕೆರೆ ತಾಲೂಕಿನ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಆಶೀರ್ವಾದ ಪಡೆದು ಬಳಿಕ ಜಗನ್ಮಾತೆ ಸ್ವರ್ಣಗೌರಿ ದೇವಿ ದೇವಾಲಯಕ್ಕೆಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿ ನಂತರ ದೇವಾಲಯದ ಮುಂದೆ ಸೇರಿದ್ದ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಜೆಡಿಎಸ್‌ನಲ್ಲೂ ಭಿನ್ನಾಭಿಪ್ರಾಯ: ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಪರ 30ರಷ್ಟು ಇದ್ದರೆ 70ರಷ್ಟು ಮಂದಿ ಅವರ ವಿರುದ್ಧ ಇದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಜಿಲ್ಲೆಯಲ್ಲಿ ಜೆಡಿಎಸ್ ನೆಲಕಚ್ಚಲು ಆರಂಭಿಸಿದೆ.
ಜೆಡಿಎಸ್‌ನಲ್ಲೂ ಆಂತರಿಕ ಭಿನ್ನಾಭಿಪ್ರಾಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೇವೇಗೌಡರು ಹೇಗೆ ಕಾರ್ಯ ನಿರ್ವಹಿಸಿದರೋ ಅದೇ ರೀತಿ ಜಿಲ್ಲೆಯ ಮತದಾರರು ಮತದಾನ ಹತ್ತಿರ ಬರುತ್ತಿದ್ದಂತೆ ಕುಟುಂಬ ರಾಜಕಾರಣದಿಂದ ಬೇಸತ್ತು ಗುಪ್ತವಾಗಿ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂದುವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕುಟುಂಬ ರಾಜಕಾರಣವೇ ನಿಲ್ಲಬೇಕು ಎಂಬುದೇ ನನ್ನ ಮೊದಲ ಗುರಿಯಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಅಣ್ಣಾಯಕನಹಳ್ಳಿ ವಿಜಯ್‌ಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್,ಬಿಜೆಪಿ ಮುಖಂಡರಾದ ಬಸವರಾಜ್,
ಗ್ರಾಪಂ ಸದಸ್ಯ ಎಂ.ಡಿ ರಮೇಶ್,ಡಿ.ಎಂ.ಕುರ್ಕೆ ಎಂ.ಜಿ.ಲೋಕೇಶ್,ಎಂ.ಬಿ.ಅಶೋಕ್, ಕಲ್ಲುಸಾದರಹಳ್ಳಿ ದೀಪಕ್, ಎಂ.ಸಿ.ಚಂದ್ರಶೇಖರ್, ಎಂ.ಎಸ್. ಪುಟ್ಟಮಲ್ಲಪ್ಪ, ಎಂಬಿ ಕೊಟ್ಟೂರಪ್ಪ, ಎಂ.ಆರ್. ಕಾಂತರಾಜ್ ಎಂ. ಚನ್ನಬಸಪ್ಪ, ಎಂ.ಯೋಗೀಶ್, ಎಂ.ಎಸ್. ಗೋವಿಂದ,ಎಂ.ಟಿ. ಪ್ರವೀಣ್, ದಿವಾಕರ್ ಮುಂತಾದವರಿದ್ದರು.