Advertisement

ಹೆಬ್ಬಾಗಿಲಿಗೆ ಗೌಡರು ಬರುವರೇ? 

06:35 AM Mar 18, 2019 | Team Udayavani |

ಕ್ಷೇತ್ರದ ವಸ್ತುಸ್ಥಿತಿ: ಬೆಂಗಳೂರು ಉತ್ತರ ಭಾಗದ “ಹೆಬ್ಬಾಗಿಲು’ಎಂದೇ ಬಣ್ಣಿಸಿಕೊಂಡಿರುವ ಹೆಬ್ಬಾಳ ಕ್ಷೇತ್ರ ಈ ಹಿಂದೆ ನಡೆದ ಚುನಾವಣೆಗಳಲ್ಲಿ
ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ, 2018ರ ವಿಧಾನ ಚುನಾವಣೆಯಲ್ಲಿ ಈ ಕೋಟೆಯನ್ನು ಕೈ ತನ್ನವಶಕ್ಕೆ ಪಡೆಯುವಲ್ಲಿ ಸಫ‌ಲವಾಯಿತು. ವಿಭಿನ್ನ ಫ‌ಲಿತಾಂಶಕ್ಕೆ ಸಾಕ್ಷಿಯಾಗಿರುವ ಕ್ಷೇತ್ರದ ಮತದಾರ ಬಿಬಿಎಂಪಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಮಲ ಚಿನ್ಹೆಯತ್ತ ಒಲವು ಹೊಂದಿರುವುದು ಅಂಕಿ-ಅಂಶಗಳು ಹೇಳುತ್ತಿವೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ ಈ ಕ್ಷೇತ್ರದಲ್ಲಿ ಶೇ.55.5%ರಷ್ಟು ಮತ ಪಡೆದರು. ಒಟ್ಟಾರೆ 2,01,910 ಮತಗಳಲ್ಲಿ ಬಿಜೆಪಿ 1,12,144 ಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸದಾನಂದಗೌಡರ ಪ್ರತಿ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ ಪಕ್ಷದ ಸಿ.ನಾರಾಯಣಸ್ವಾಮಿ 78,109 ಮತ್ತು ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಬಾಬು ಮ್ಯಾಥ್ಯೂವ್‌ 6,517 ಮತಗಳನ್ನು ಪಡೆದಿದ್ದರು. ಆದರೆ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಅಬ್ದುಲ್‌ ಅಜೀಂ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಣಕ್ಕಿಳಿಯುವ ನಿರೀಕ್ಷೆಯಿದ್ದು ಕದನ ಕಣ ಕೌತುಕ ಹುಟ್ಟಿಸಿದೆ. ಪಾಲಿಕೆ ವಿಚಾರಕ್ಕೆ ಬಂದರೆ 8 ವಾರ್ಡ್‌ಗಳ ಪೈಕಿ 4ರಲ್ಲಿ ಬಿಜೆಪಿ ಪ್ರಾಬಲ್ಯ ತೋರಿದರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ 2 ಸ್ಥಾನ ಪಡೆದಿವೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ದೊಡ್ಡ ಸಂಖ್ಯೆಯಲ್ಲಿವೆ. ಇದರ ಜತೆಗೆ ಒಕ್ಕಲಿಗ ಮತ್ತು ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ನಿರ್ಣಾಯಕ ಪಾತ್ರ ವಹಿಸಲಿದೆ. 

ಪ್ರಮುಖ ಕೊಡುಗೆಗಳು
-ಸಂಸದರ ನಿಧಿಯಿಂದ ವಿವಿಧ ಕಾಮಗಾರಿಗಳಿಗೆ ಅನುದಾನ
-ವಿಮಾನನಿಲ್ದಾಣ ರಸ್ತೆಗೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ ಅಂಚಿನ ಗ್ರಾಮಗಳಿಗೆ ಕೆಳ ಸೇತುವೆ ನಿರ್ಮಾಣ

ನಿರೀಕ್ಷೆ
-ಮೆಟ್ರೋ ವಿಸ್ತರಣೆ ಮಾಡಬೇಕು
-ರಸ್ತೆಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ

Advertisement

-8 ವಾರ್ಡ್‌ಗಳು 
-4 ಬಿಜೆಪಿ 
-2 ಕಾಂಗ್ರೆಸ್‌
-2 ಜೆಡಿಎಸ್‌

-4,06,490 ಜನಸಂಖ್ಯೆ
-2,60,267 ಮತದಾರರ ಸಂಖ್ಯೆ
-1,33,898 ಪುರುಷರು
-1,26,369 ಮಹಿಳೆಯರು

 2014ರ ಚುನಾವಣೆಯಲ್ಲಿ 
-2,01,910 (55.44%) ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು-
-1,12,144 ಮತಗಳು (55.5%) ಬಿಜೆಪಿ ಪಡೆದ ಮತಗಳು 
-78,109 ಮತಗಳು (38.7%)  ಕಾಂಗ್ರೆಸ್‌ ಪಡೆದ ಮತಗಳು
-6,517 ಮತಗಳು (3.2%)  ಜೆಡಿಎಸ್‌ ಪಡೆದ ಮತಗಳು 

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ವೈ.ಎ. ನಾರಾಯಣ ಸ್ವಾಮಿ
-ಶಾಸಕ – ಬಿಜೆಪಿ
-ಪಾಲಿಕೆಯಲ್ಲಿ ಸದಸ್ಯರು
-3 ಕಾಂಗ್ರೆಸ್‌ 
-5 ಬಿಜೆಪಿ

ಮಾಹಿತಿ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next