Advertisement
ಬೀದರ್ ಹಾಗೂ ರಾಯಚೂರು ನಗರಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸು ವಂತೆ ಬಹಳ ವರ್ಷಗಳ ಬೇಡಿಕೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅಂಗೀಕಾರ ಲಭಿಸುವ ಸಾಧ್ಯತೆ ಇದೆ. ಇದರ ಹೊರತಾಗಿ ರಾಜ ಕೀಯ ಮಹತ್ವಾಕಾಂಕ್ಷೆಯ ಕೆಲವು ಭರವಸೆಗಳು ಈ ಸಭೆಯಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.
-ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ ರಚನೆಯಾದ 16 ತಾಲೂಕುಗಳಲ್ಲಿ ಏಕರೂಪ ಆಡಳಿತಸೌಧ ನಿರ್ಮಾಣಕ್ಕೆ
135 ಕೋಟಿ ರೂ.
-ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕೆರೆ ತುಂಬಿಸುವ 135 ಕೋ. ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ
-ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ನಿರ್ಮಾಣಕ್ಕೆ 130 ಕೋ. ರೂ.
-ಮಾನ್ವಿ ತಾಲೂಕಿನ ಕುರ್ಡಿಕೆರೆ ತುಂಬಿಸಲು 132 ಕೋಟಿ ರೂ., ಕಲಬುರಗಿ, ಕೊಪ್ಪಳ, ಗದಗ ಜಿಟಿಟಿಸಿಗೆ ತಲಾ 53.25 ಕೋಟಿ ರೂ.
-ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ವಿಶ್ವವಿದ್ಯಾನಿಲಯ ಮಸೂದೆಗೆ ಒಪ್ಪಿಗೆ ಸಾಧ್ಯತೆ
-ಗದಗ, ಕೊಪ್ಪಳ, ಚಾಮರಾಜ ನಗರದಲ್ಲಿ 450 ಹಾಸಿಗೆ ಆಸ್ಪತ್ರೆ ಗಳಿಗೆ ವೈದ್ಯಕೀಯ ಸಾಮಗ್ರಿ ಖರೀದಿಗೆ 149 ಕೋಟಿ ರೂ.
-ವೈದ್ಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಯಂತ್ರ ಖರೀದಿಗೆ 85 ಕೋಟಿ ರೂ.
-43 ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿ ಸುವುದಕ್ಕೆ 48 ಕೋ.ರೂ. ಬಿಡುಗಡೆ ಸಾಧ್ಯತೆ
Related Articles
-ಸಿದ್ದರಾಮಯ್ಯ, ಮುಖ್ಯಮಂತ್ರಿ
Advertisement