Advertisement

ಕೇಸರಿ ಪಾಸ್‌ಪೋರ್ಟ್‌ ನಿರ್ಧಾರ ವಾಪಸ್‌

06:45 AM Jan 31, 2018 | Team Udayavani |

ನವದೆಹಲಿ: ಕೇಸರಿ ಬಣ್ಣದ ಪಾಸ್‌ಪೋರ್ಟ್‌ ಜಾರಿಗೆ ತರುವ ಇರಾದೆ ಮತ್ತು ಹಿಂದಿನ ಪುಟ ಖಾಲಿ ಬಿಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಇದರ ಜತೆಗೆ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗದವರಿಗೂ ಪಾಸ್‌ಪೋರ್ಟ್‌ ನೀಡುವ ಸಲಹೆಯನ್ನೂ ಪರಿಗಣಿ ಸದೇ ಇರಲು ನಿರ್ಧರಿಸಿದೆ. 

Advertisement

ವಿದೇಶಾಂಗ ಇಲಾಖೆ  ವಕ್ತಾರ ರವೀಶ್‌ ಕುಮಾರ್‌ ಪ್ರಕಾರ,  ಹಲವು ಹಂತದ ಚರ್ಚೆಯ ಬಳಿಕ ಹಾಲಿ ವ್ಯವಸ್ಥೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.  

ಪಾಸ್‌ಪೋರ್ಟ್‌ನ ಹಿಂದಿನ ಪುಟಗಳಲ್ಲಿ ವಿಳಾಸ ಇರುವುದರಿಂದ ವಿಶೇಷವಾಗಿ ಮಹಿಳೆಯರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ಅದನ್ನು ಖಾಲಿ ಬಿಡಲು ನಿರ್ಧರಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next