Advertisement

ಕೇಂದ್ರ ಬಜೆಟ್- ಚುನಾವಣೆ ಮೇಲೆ ಚಿತ್ತ; ರೈತರು, ಬಡವರು, ಕೃಷಿಗೆ ಒತ್ತು

12:00 PM Feb 01, 2018 | Team Udayavani |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪೂರ್ಣ ಪ್ರಮಾಣದ ಬಜೆಟ್ ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಈ ಬಾರಿ ನಿರೀಕ್ಷೆಯಂತೆ ಕೃಷಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

Advertisement

ಪ್ರಸಕ್ತ ವರ್ಷದ ಎಂಟು ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಗಳ ಸವಾಲುಗಳನ್ನು ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರೈತರು, ಗ್ರಾಮೀಣಾಭಿವೃದ್ಧಿ, ಬಡವರ ಅಭಿವೃದ್ಧಿ ಮಂತ್ರದ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ:

ಆಪರೇಷನ್ ಗ್ರೀನ್ ಯೋಜನೆಗೆ 500 ಕೋಟಿ, 1290 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಂಬೋ ಮಿಷನ್ ಯೋಜನೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ 10 ಸಾವಿರ ರೂಪಾಯಿ ಕೋಟಿ ರೂಪಾಯಿ.

ಗ್ರಾಮೀಣ ಮೂಲಸೌಕರ್ಯಕ್ಕೆ 22 ಸಾವಿರ ಕೋಟಿ ರೂ. ಅನುದಾನ. ಆಯುಷ್ಮಾನ್ ಭಾರತ್ ಹೆಸರಿನಲ್ಲಿ ಆರೋಗ್ಯ ಸೇವೆ. ಪ್ರಾಥಮಿಕ, ಆರೋಗ್ಯ ಕ್ಷೇತ್ರಕ್ಕೆ

Advertisement

ಎಲ್ಲಾ ಬಡಕುಟುಂಬಗಳಿಗೆ ಆರೋಗ್ಯ ಭಾಗ್ಯ; ಹೆಲ್ತ್ ವೆಲ್ ನೆಸ್ ಸ್ಕೀಮ್ ಗಾಗಿ 1200 ಕೋಟಿ ರೂ. ಮೀಸಲು, ಆರೋಗ್ಯ ಭಾಗ್ಯಕ್ಕಾಗಿ 50 ಕೋಟಿ ಜನಕ್ಕೆ 5ಲಕ್ಷ ರೂ. ವಿಮೆ. 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಭಾಗ್ಯ. ಎಲ್ಲಾ ಬಡ ಕುಟುಂಬಗಳಿಗೆ ಅಪಘಾತ ವಿಮೆ, ಕ್ಷಯ ರೋಗಿಗಳಿಗೆ ಮಾಸಿಕ 600 ರೂಪಾಯಿ ನೀಡಲಾಗುವುದು. ಟಿಬಿ ರೋಗಿಗಳ ಪೌಷ್ಠಿಕಾಂಶಕ್ಕಾಗಿ 600 ಕೋಟಿ.

ಸಾಮಾಜಿಕ ಭದ್ರತೆಗೆ 9,975 ಕೋಟಿ ಮೀಸಲು.

ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ:ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆ ಹೊರೆ ಇಳಿಕೆ, ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಆದ್ಯತೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ ಮಂಜೂರಾತಿ ಸರಳೀಕರಣ.

Advertisement

Udayavani is now on Telegram. Click here to join our channel and stay updated with the latest news.

Next