Advertisement

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

11:51 PM Jan 05, 2025 | Team Udayavani |

ಹೊಸದಿಲ್ಲಿ: ತನಿಖಾ ಸಂಸ್ಥೆಗಳು ತನಿಖೆಯ ಹೆಸರಲ್ಲಿ ಜಪ್ತಿ ಮಾಡುವ ಮೊಬೈಲ್‌, ಲ್ಯಾಪ್‌ಟಾಪ್‌ ಮುಂತಾದ ಡಿಜಿಟಲ್‌ ಸಾಧನಗಳಲ್ಲಿ ಇರುವ ಖಾಸಗಿ ಮಾಹಿತಿಗಳು ಬಹಿರಂಗವಾಗದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ‌ ಹೆಜ್ಜೆಯಿಟ್ಟಿದೆ.

Advertisement

ಡಿಜಿಟಲ್‌ ಅಥವಾ ಕಾಗದಪತ್ರಗಳ ರೂಪದಲ್ಲಿನ ದಾಖಲೆಗಳನ್ನು ನಿರ್ವಹಿಸುವ ಬಗ್ಗೆ ಕೇಂದ್ರ  ಮಾರ್ಗಸೂಚಿ ಸಿದ್ಧಪಡಿಸುತ್ತಿದೆ.

ಲಾಟರಿ ದೊರೆ ಸ್ಯಾಂಟಿಯಾಗೋ ಮಾರ್ಟಿನ್‌ ವಿರುದ್ಧ ಪ್ರಕರಣದಲ್ಲಿ ಐಫೋನ್‌ ವಶಪಡಿಸಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸೋಮವಾರ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದ್ದು, ನ್ಯಾಯಪೀಠದ ಮುಂದೆ ಕೇಂದ್ರ ಸರಕಾರ‌ ಉದ್ದೇಶಿತ ನಿಯಮಗಳನ್ನು ವಿವರಿಸುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next