Advertisement

ಸರಕಾರದಿಂದ 3 ಲಕ್ಷ ಮನೆ ನಿರ್ಮಾಣದ ಪಣ: ಸೋಮಣ್ಣ

10:49 PM Apr 09, 2022 | Team Udayavani |

ಬೆಂಗಳೂರು: ರಾಜ್ಯದ ಬಡ ಕುಟುಂಬಗಳಿಗೆ ಆಸರೆ ಆಗಲಿ ಎನ್ನುವ ಉದ್ದೇಶದಿಂದ ಸರಕಾರ 3 ಲಕ್ಷ ಮನೆಗಳನ್ನು ನಿರ್ಮಿಸುವ ಪಣತೊಟ್ಟಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

Advertisement

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಶನಿವಾರ ವಿವಿ ಪುರಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ 1.8 ಲಕ್ಷ ಮನೆಗಳು ಮತ್ತು ರಾಜೀವ್‌ ಗಾಂಧೀ ಆವಾಸ್‌ ವಸತಿ ಯೋಜನೆಯಡಿ 1.20 ಲಕ್ಷ ಮನೆಗಳು ಸೇರಿದಂತೆ ಒಟ್ಟು 3 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ನಗರ ಪ್ರದೇಶದಲ್ಲಿರುವ ಬಡವರಿಗೆ ಈಗಾಗಲೇ 1.20 ಲಕ್ಷ ಮನೆಗಳನ್ನು ಹಂಚಿಕೆ ಮಾಡಿದೆ. ಮುಂದಿನ ದಿನಗಳಲ್ಲಿ 1.8 ಲಕ್ಷ ಮನೆಗಳನ್ನು ಸೂರಿಲ್ಲದ ಬಡವರಿಗೆ ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿ 2,800ಕ್ಕೂ ಅಧಿಕ ಕೊಳಗೇರಿ ಪ್ರದೇಶಗಳಿವೆ.

ಇದನ್ನೂ ಓದಿ:ಅಮಿತ್‌ ಶಾ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 6,300 ಎಕರೆ ಪ್ರದೇಶವನ್ನು ಕೊಳಚೆ ಪ್ರದೇಶ ನಿವಾಸಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು. ಕೊಳಗೇರಿ ನಿವಾಸಿಗಳಿಗೆ ಯಾರ್ಯಾರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರಿಗೆ ಮುಂದಿನ ದಿನಗಳಲ್ಲಿ ಅವರ ಮನೆ ಬಾಗಿಲಿಗೆ ತೆರಳಿ ಹಕ್ಕುಪತ್ರ ನೀಡುವಂತಹ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

ಮಹಿಳೆಯರ ಹೆಸರಿಗೆ ಮಾತ್ರ ಹಕ್ಕುಪತ್ರ
ಮಹಿಳೆಯರ ಸಬಲೀಕರಣ ಕೂಡ ಇದರಲ್ಲಿ ಸೇರಿದ್ದು ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡುವಾಗ ಮಹಿಳೆಯ ಹೆಸರಿಗೆ ಮಾತ್ರ ನೀಡಬೇಕು ಎಂದು ಸಚಿವ ಸೋಮಣ್ಣ ಅಧಿಕಾರಿಗಳಿಗೆ ಮಾಡಿದರು. ಪುರುಷ ಫ‌ಲಾನುಭವಿಗಳು ಹಕ್ಕು ಪತ್ರಗಳನ್ನು ಬೇರೆಯವರಿಗೆ ಮಾರಿಕೊಳ್ಳುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಮಹಿಳೆಯರ ಹೆಸರಿಗೆ ಮಾತ್ರ ಹಕ್ಕುಪತ್ರ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next