Advertisement

ಹಣದುಬ್ಬರ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ: ನಿರ್ಮಲಾ ಸೀತಾರಾಮನ್

06:21 PM Feb 20, 2023 | Team Udayavani |

ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರತ್ತ ಗಮನ ಹರಿಸುವುದನ್ನು ಮುಂದುವರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ವಿವಿಧ ಮಧ್ಯಸ್ಥಗಾರರೊಂದಿಗೆ 2023-24ರ ಬಜೆಟ್ ನಂತರದ ಚರ್ಚೆಯಲ್ಲಿ, ಹಣದುಬ್ಬರವನ್ನು ತಗ್ಗಿಸುತ್ತದೆಯೇ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅದರ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತದೆ ಎಂದರು.

”ಉದಾಹರಣೆಗೆ, ಬೇಳೆಕಾಳುಗಳ ವಿಷಯದಲ್ಲಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ದ್ವಿದಳ ಧಾನ್ಯಗಳನ್ನು ಬೆಳೆಯಲು ಸರಕಾರವು ರೈತರನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಸ್ಥಳೀಯ ಲಭ್ಯತೆಯನ್ನು ಸುಧಾರಿಸಲು ಕೆಲವು ಬೇಳೆಕಾಳುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ” ಎಂದರು.

”ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ, ಉದಾಹರಣೆಗೆ, ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲು ರೈತರನ್ನು ಪ್ರೋತ್ಸಾಹಿಸುತ್ತೇವೆ, ಇದರಿಂದಾಗಿ ಮುಂಬರುವ ಬಿತ್ತನೆ ಋತುವಿನಲ್ಲಿ ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯು ಹೆಚ್ಚಾಗುತ್ತದೆ” ಎಂದರು.

“ನಾವು ಎಲ್ಲೆಲ್ಲಿ ಆಮದು ಮಾಡಿಕೊಳ್ಳುತ್ತಿದ್ದೇವೋ, ಯಾವುದೇ ಬೇಳೆಕಾಳುಗಳಾಗಿದ್ದರೂ, ಸರಕಾರವು ಆಮದು ಸುಂಕವನ್ನು ಒಂದೇ ಅಂಕೆಗೆ ಇಳಿಸಿದೆ. ಅದನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಇದು ಆಮದುಗಳನ್ನು ಅನುಕೂಲಕರವಾಗಿಸಿದೆ ಬೇಳೆಕಾಳುಗಳು ತ್ವರಿತವಾಗಿ ಮತ್ತು ಅಗ್ಗವಾಗಿ ಲಭ್ಯವಿದೆ ” ಎಂದರು.

Advertisement

”ಕಳೆದ ಮೂರು ವರ್ಷಗಳಿಂದ ಸತತವಾಗಿ ಖಾದ್ಯ ತೈಲದ ಆಮದನ್ನು ಬಹುತೇಕ ತೆರಿಗೆ ಮುಕ್ತಗೊಳಿಸಲಾಗಿದೆ. ಈ ಕಾರಣದಿಂದಾಗಿ ಪಾಮ್ ಕ್ರೂಡ್ ಅಥವಾ ಪಾಮ್ ರಿಫೈನ್ಡ್ ಆಯಿಲ್ ಮಾರ್ಗವನ್ನು ಸಹ ತೆರೆಯಲಾಗಿದೆ. ಇದರಿಂದ ಖಾದ್ಯ ತೈಲ ಪೂರೈಕೆ ಸಾಕಷ್ಟು ಸುಲಭವಾಗಿದೆ”
ಎಂದರು.

ಸಗಟು ಬೆಲೆ ಆಧಾರಿತ ಹಣದುಬ್ಬರವು ಜನವರಿಯಲ್ಲಿ 2 ವರ್ಷಗಳ ಕನಿಷ್ಠ ಮಟ್ಟವಾದ 4.73 ಶೇಕಡಾಕ್ಕೆ ಇಳಿಕೆಯಾಗಿದ್ದು, ಆಹಾರ ಪದಾರ್ಥಗಳು ದುಬಾರಿಯಾಗಿದ್ದರೂ ಸಹ ತಯಾರಿಸಿದ ವಸ್ತುಗಳು, ಇಂಧನ ಮತ್ತು ಶಕ್ತಿಯ ಬೆಲೆಗಳನ್ನು ಸರಾಗಗೊಳಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next