Advertisement
ಕೇಂದ್ರ ಸರಕಾರ ರಚಿಸಿರುವ ಕರಡು ವೇತನ ಸಂಹಿತೆಯಲ್ಲಿ ಈ ರೀತಿಯ ಪ್ರಸ್ತಾವವೊಂದಿದೆ. ದಿನದ ಕೆಲಸದ ಅವಧಿಯನ್ನು 9 ಗಂಟೆಗೆ ಏರಿಸುವುದು, ಭವಿಷ್ಯದಲ್ಲಿ ವೇತನ ನಿರ್ಧರಿಸುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಅನುಸರಿಸುವುದು ಸಹಿತ ಹಲವು ವಿಚಾರಗಳನ್ನು ಸಂಹಿತೆಯ ಕರಡಿನಲ್ಲಿ ಉಲ್ಲೇಖೀಸಲಾಗಿದೆ.ಆದರೆ ರಾಷ್ಟ್ರೀಯ ಕನಿಷ್ಠ ವೇತನ ನಿಗದಿ ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿಲ್ಲ.ಕನಿಷ್ಠ ವೇತನವನ್ನು ನಿರ್ಧರಿಸುವಾಗ ದೇಶವನ್ನು ಮೂರು ಭೌಗೋ ಳಿಕ ಪ್ರದೇಶಗಳಾಗಿ ವರ್ಗೀ ಕರಿಸ ಬೇಕು. 40 ಲಕ್ಷ ಅಥವಾ ಹೆಚ್ಚು ಜನ ಸಂಖ್ಯೆ ಯಿರುವ ಮೆಟ್ರೋ ಪಾಲಿ ಟನ್ ಪ್ರದೇಶ, 10ರಿಂದ 40 ಲಕ್ಷ ದೊಳಗೆ ಜನಸಂಖ್ಯೆ ಇರುವ ಮೆಟ್ರೋ ಪಾಲಿಟನ್ ಹೊರತಾದ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳು ಎಂದು ವರ್ಗೀಕರಿಸ ಬೇಕು ಎಂದು ಇದರಲ್ಲಿ ಪ್ರಸ್ತಾವಿಸಲಾಗಿದೆ.
ನ.1ರಿಂದಲೇ ಈ ಕರಡಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೋರ ಲಾಗಿದೆ. ಪ್ರತಿಕ್ರಿಯೆಗಳನ್ನು ಆಧರಿಸಿ ಡಿಸೆಂಬರ್‌ನಲ್ಲಿ ಕರಡು ನಿಯಮಗಳನ್ನು ಅಂತಿಮಗೊಳಿಸ ಲಾಗುತ್ತದೆ.