ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಯೂಥ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಒಂದು ಕೋಟಿ ಪರಿಹಾರದ ಜತೆಗೆ ಅವರಿಗೆ ನೀಡಬೇಕಾದ ನಾಲ್ಕು ಕೋಟಿ ರೂ. ನೀಡಬೇಕು ಎಂದರು.
ಪಾಟೀಲ್ ಕುಟುಂಬ ಬಡ ಕುಟುಂಬವಾಗಿದೆ. ಹೆಂಡತಿ ಬಂಗಾರ ಅಡವಿಟ್ಟು ಕಾಮಗಾರಿ ಮಾಡಿಸಿದ್ದಾನೆ. ಅವನಿಗೆ ಸರ್ಕಾರ ಅನ್ಯಾಯ ಮಾಡಬಾರದು. ಆತನ ಹೆಂಡತಿಗೆ ಸರ್ಕಾರ ಕೆಲಸ ನೀಡಬೇಕು. ಕಾಂಗ್ರೆಸ್ ಪಕ್ಷ ಕೂಡ ಆ ಕುಟುಂಬಕ್ಕೆ 11 ಲಕ್ಷ ರೂ.ಸಹಾಯ ಧನ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ:ಸಿಎಂ ಗೃಹ ಕಚೇರಿಗೆ ಮುತ್ತಿಗೆ ಯತ್ನ: ಹೈಡ್ರಾಮಾ ಸೃಷ್ಟಿಸಿದ ಕೈ ನಾಯಕರು
ರಾಜ್ಯದಲ್ಲಿ ಭಂಡ ಸರ್ಕಾರ ಅಧಿಕಾರದಲ್ಲಿದೆ. ಈಶ್ವರಪ್ಪ ಅವರನ್ನು ರಕ್ಷಣೆ ಮಾಡುವುದನ್ನು ಬಿಟ್ಟು ಸಿಎಂ ಬೊಮ್ಮಾಯಿ ಅವರು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.