Advertisement
ಬುಧವಾರ “ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ ಅವರು, ಕನ್ನಡ ಚಿತ್ರರಂಗದ ಸವಾಲು, ಬೆಳವಣಿಗೆ ಸಹಿತ ಹಲವು ವಿಚಾರಗಳ ಕುರಿತು ಚರ್ಚಿಸಿದರು. “ಕನ್ನಡ ಚಿತ್ರರಂಗಕ್ಕೆ ಮುಖ್ಯವಾಗಿ ಚಿತ್ರನಗರಿಯ ಅಗತ್ಯವಿದೆ. ಪ್ರತಿ ಸರಕಾರಗಳು ಚಿತ್ರನಗರಿಗೆ ಜಾಗ ಘೋಷಣೆ ಮಾಡುತ್ತವೆ. ಆದರೆ ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಫಿಲಂ ಸಿಟಿ ನಿರ್ಮಾಣವಾಗಬೇಕು ಎಂಬುದು ಚಿತ್ರರಂಗದ ಹಲವು ವರ್ಷಗಳ ಬೇಡಿಕೆ. ಫಿಲಂ ಸಿಟಿ ಎಲ್ಲಾದರೂ ಆಗಲಿ, ಆದರೆ ಆದಷ್ಟು ಬೇಗ ನಿರ್ಮಾಣವಾಗಲಿ. ಇದರಿಂದ ಇಡೀ ಚಿತ್ರೋದ್ಯಮಕ್ಕೇ ಅನುಕೂಲವಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಯವರಲ್ಲಿ ಕನ್ನಡ ಚಿತ್ರರಂಗಕ್ಕೆ ಅಗತ್ಯವಾಗಿ ಆಗಬೇಕಾದ ಕಾರ್ಯಗಳ ಕುರಿತು ಚರ್ಚಿಸಿದ್ದೇವೆ. ಅವರ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಹಾಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗ ನಿರೀಕ್ಷೆ ಇಟ್ಟಿದೆ’ ಎಂದರು. ಇದರ ಚಲನಚಿತ್ರ ಪ್ರಶಸ್ತಿ, ಸಬ್ಸಿಡಿ ಸಹಿತ ಹಲವು ವಿಚಾರಗಳ ಕುರಿತು ಸರಕಾರದ ಗಮನ ಸೆಳೆದಿರುವುದಾಗಿ ಹೇಳಿದರು. Advertisement
Cinema: ಸರಕಾರ ಚಿತ್ರನಗರಿ ನಿರ್ಮಿಸಬೇಕು: ವಾಣಿಜ್ಯ ಮಂಡಳಿ ಮುಖ್ಯಸ್ಥರ ಆಗ್ರಹ
12:16 AM Jan 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.