Advertisement

ಅರ್ಜಿ ಸಲ್ಲಿಸಿದ್ದಕ್ಕೆ ಕೊಲೆ, ಅತ್ಯಾಚಾರ ಬೆದರಿಕೆ

06:00 AM Jun 30, 2018 | |

ನವದೆಹಲಿ: ಮುಸ್ಲಿಮರಲ್ಲಿರುವ ನಿಕಾಹ್‌ ಹಲಾಲಾ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಮುಸ್ಲಿಂ ಮಹಿಳೆಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳು ಬರತೊಡಗಿವೆ. ಹೀಗೆಂದು ಸ್ವತಃ ಸಮೀನಾ ಬೇಗಂ ಅವರೇ ಆರೋಪಿಸಿದ್ದಾರೆ.

Advertisement

ಅರ್ಜಿ ವಾಪಸ್‌ ಪಡೆಯದಿದ್ದರೆ ಅತ್ಯಾಚಾರ ಮಾಡುವುದಾಗಿ, ಕೊಲೆ ಮಾಡುವುದಾಗಿ ನನಗೆ ಮತ್ತು ನನ್ನ ವಕೀಲರಿಗೆ ಬೆದರಿಕೆ ಕರೆಗಳು ಬರುತ್ತಿವೆ. ದೆಹಲಿಯ ಓಕ್ಲಾ ವಿಹಾರ್‌ನಲ್ಲಿ ನನ್ನ 3 ಮಕ್ಕಳೊಂದಿಗೆ ವಾಸಿಸುತ್ತಿದ್ದು, ಇಲ್ಲಿನ ಕೆಲವರು ನನ್ನ ಮೇಲೆ ದಾಳಿ ನಡೆಸಿ, ಬಟ್ಟೆಯನ್ನೂ ಹರಿದು ಎಳೆದಾಡಿದ್ದರು ಎಂದೂ ಸಮೀನಾ ಹೇಳಿದ್ದಾರೆ. ಏತನ್ಮಧ್ಯೆ, ನಿಕಾಹ್‌ ಹಲಾಲಾ ಮತ್ತು ಬಹುಪತ್ನಿತ್ವ ಸಂಪ್ರದಾಯಕ್ಕೂ ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ವಿರೋಧಿ ನಿಲುವನ್ನು ತಳೆಯಲಿದೆ ಎಂದು ಕಾನೂನು ಇಲಾಖೆಯ ಮೂಲಗಳು ತಿಳಿಸಿವೆ. ತ್ರಿವಳಿ ತಲಾಖ್‌ ವಿಚಾರಣೆಯಲ್ಲೂ ಕೇಂದ್ರ ಇದೇ ರೀತಿಯ ನಿಲುವನ್ನು ತಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next