Advertisement
ತಮ್ಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಶೋಕ ರಸ್ತೆಯ ಎಂಪ್ರಸ್ ಶಾಲೆ, ಶಿರಾಗೇಟ್ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕ್ಯಾತ್ಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದು ಸರ್ಕಾರದ ನಿಯಮದಹಿನ್ನೆಲೆಯಲ್ಲಿ ಶಾಸಕರು ತಮ್ಮ ವ್ಯಾಪ್ತಿಯ ಮೂರು ಶಾಲೆಗಳನ್ನು ದತ್ತು ಪಡೆದಿದ್ದುಈ ಶಾಲೆಗಳುಈಗ ಹೊಸ ರೂಪದಲ್ಲಿ ಅಭಿವೃದ್ಧಿಕಾಣಲಾರಂಭಿಸಿವೆ.
Related Articles
Advertisement
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ: ಈ ಶಾಲೆಗಳಲ್ಲಿ ಆಟದ ಮೈದಾನ, ಶಾಲಾ ಕಾಂಪೌಂಡ್ ಮಕ್ಕಳಿಗೆ ಬಿಸಿಯೂಟ, ಜೊತೆಗೆ ದೈಹಿತ ಶಿಕ್ಷಕರೂ ಸೇರಿದಂತೆ ಶಿಕ್ಷಕರ ಕೊರತೆ ಇರುವುದಿಲ್ಲ. ನಗರದಲ್ಲಿಇರುವ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲು ತುಮಕೂರು ಶಾಸಕರು ಮುಂದಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿಕೆಲವು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಮಾಡಲು ಮುಂದಾಗಿದ್ದು ನಗರದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಲಿವೆ.
ನಬಾರ್ಡ್‌ನಿಂದ ಹಣ ತಂದು ಅಭಿವೃದ್ಧಿ : ತುಮಕೂರು ನಗರದಲ್ಲಿ ನೂರಾರು ಸರ್ಕಾರಿ ಶಾಲೆಗಳು ಇವೆ, ಆದರೆ ಇದರಲ್ಲಿ ಮಕ್ಕಳಿಗೆ ಅನುಕೂಲ ವಾಗುವ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ನಗರದ ಸರ್ಕಾರಿ ಜೂನಿಯರ್‌ಕಾಲೇಜಿನವ್ಯಾಪ್ತಿಯಲ್ಲಿ ಉತ್ತಮ ಪರಿಸರ ಇದೆ. ಇಲ್ಲಿಯ ಶಾಲಾಕಟ್ಟಡಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇಲ್ಲಿಯೂ ಒಂದುಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಎಲ್ಲಾ ಸಿದ್ಧತೆ ನಡೆದಿದೆ.ನಬಾರ್ಡ್‌ನಿಂದ ಹಣ ತಂದು ಇಲ್ಲಿಯ ಶಾಲೆಗಳಅಭಿವೃದ್ಧಿಯಾಗುತ್ತಿದೆ. ಎಂಪ್ರಸ್ ಶಾಲೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಮೇಲೆ ಈ ಶಾಲೆಯಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಸ್ಮಾರ್ಟ್ ಸಿಟಿಯೋಜನೆಯಲ್ಲಿ ಜೂನಿಯರ್ ಕಾಲೇಜು ಮೈದಾನವೂ ಅಭಿವೃದ್ಧಿಯಾಗುತ್ತಿದೆ. ಇದೆಲ್ಲಾ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪೂರಕವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಸರ್ಕಾರಿ ಶಾಲೆಗಳುಖಾಸಗಿ ಶಾಲೆಗಳ ರೀತಿಯಲ್ಲಿ ಅಭಿವೃದ್ಧಿಕಾಣ ಬೇಕು ಎಂದು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಗರದ ಮೂರುಶಾಲೆಗಳನ್ನು ದತ್ತು ಪಡೆದಿದ್ದು ಈ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಅಗತ್ಯಕ್ರಮಕೈಗೊಂಡಿದ್ದೇವೆ. – ಜಿ.ಬಿ.ಜ್ಯೋತಿ ಗಣೇಶ್ ಶಾಸಕರು ತುಮಕೂರು ನಗರ.
ನಗರದ ಸರ್ಕಾರಿ ಶಾಲೆಗಳಲ್ಲಿಈಗ ದಾಖಲಾತಿ ಹೆಚ್ಚುತ್ತಿದೆ, ನಗರದ ಮೂರು ಶಾಲೆಗಳನ್ನು ಶಾಸಕರು ದತ್ತು ಪಡೆದಿದ್ದಾರೆ ಅವು ಅಭಿವೃದ್ಧಿಯಾಗುತ್ತಿವೆ. ಮೂರು ಶಾಲೆಗಳೂ ಕರ್ನಾಟಕಪಬ್ಲಿಕ್ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ ಶಾಲೆಗಳನ್ನು ಹೈಟೆಕ್ ಶಾಲೆ ಮಾಡಲು ಶಾಸಕರು ಮುಂದಾಗಿದ್ದಾರೆ. ಇದುಮಕ್ಕಳ ಕಲಿಕೆಗೆಹೆಚ್ಚು ಸಹಕಾರಿಯಾಗುತ್ತದೆ – ಹನುಮಾನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ
-ಚಿ.ನಿ.ಪುರುಷೋತ್ತಮ್