Advertisement

ನೇಪಾಳ, ಭೂತಾನ್‌ ಗಡಿಗೆ 12 ಹೊಸ ಬೆಟಾಲಿಯನ್‌ ಸೇರ್ಪಡೆಗೆ ಕೇಂದ್ರ ಸಮ್ಮತಿ

07:55 PM Mar 03, 2021 | Team Udayavani |

ನವದೆಹಲಿ: ನೇಪಾಳ, ಭೂತಾನ್‌, ಟಿಬೆಟ್‌ ಜತೆಗಿನ ಟ್ರೈಜಂಕ್ಷನ್‌ ಗಡಿಯಲ್ಲಿ ಸಶಸ್ತ್ರ ಸೇನಾ ಬಲಕ್ಕೆ (ಎಸ್‌ಎಸ್‌ಬಿ) ಡಜನ್‌ ತುಕಡಿಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ, ಭಾರತೀಯ ಸೇನಾಪಡೆಗೆ ಸಮ್ಮತಿ ಸೂಚಿಸಿದೆ.

Advertisement

ಇದರಂತೆ ಸಿಕ್ಕಿಮ್‌ನ ಟ್ರೈಜಂಕ್ಷನ್‌ ಗಡಿಯಲ್ಲಿ 12 ತುಕಡಿಗಳು ಒಟ್ಟು 13 ಸಾವಿರ ಯೋಧರು ಭದ್ರತೆ ಒದಗಿಸಲಿದ್ದಾರೆ. ನೇಪಾಳ (1,751 ಕಿ.ಮೀ.) ಮತ್ತು ಭೂತಾನ್‌ (699 ಕಿ.ಮೀ.) ಗಡಿಯಲ್ಲಿ ಎಸ್‌ಎಸ್‌ಬಿಯ 90 ಸಾವಿರ ಯೋಧರು ಈಗಾಗಲೇ ರಕ್ಷಣೆ ನಿರ್ವಹಿಸುತ್ತಿದ್ದಾರೆ. “ಹೊಸ ಬೆಟಾಲಿಯನ್‌ಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಸೇನೆಗೆ ಉತ್ತಮ ಬೆಂಬಲ ನೀಡಿದೆ.

ಮುಂದಿನ 3-4 ವರ್ಷದೊಳಗೆ ತರಬೇತುಗೊಂಡ ಹೊಸ ಬೆಟಾಲಿಯನ್‌ಗಳು ಎಸ್‌ಎಸ್‌ಬಿಗೆ ಬಲ ತುಂಬಲಿವೆ’ ಎಂದು ಸಶಸ್ತ್ರ ಸೇನಾಬಲದ ಡಿಜಿ ಕುಮಾರ್‌ ರಾಜೇಶ್‌ ಚಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ :ಕೊವ್ಯಾಕ್ಸಿನ್‌ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್

Advertisement

Udayavani is now on Telegram. Click here to join our channel and stay updated with the latest news.

Next