ಹೊಸದಿಲ್ಲಿ: ಸಣ್ಣ ಕಂಪೆನಿಗಳ ಪಾವತಿಸಿದ ಬಂಡವಾಳ ಮತ್ತು ವಹಿವಾಟಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರಕಾರ ಪರಿಷ್ಕರಿಸಿದೆ.
ಈ ಪರಿಷ್ಕರಣೆಯಿಂದ ಕಂಪೆನಿಗಳು ಅನುಸರಿಸಬೇಕಾದ ನಿಯಮಗಳ ಒತ್ತಡ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಣ್ಣ ಕಂಪೆನಿಗಳು ಸುಲಭವಾಗಿ ವ್ಯಾಪಾರ-ವಹಿವಾಟು ಮಾಡುವುದನ್ನು ಉತ್ತೇಜಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಣ್ಣ ಕಂಪೆನಿಗಳನ್ನು ಮರುವ್ಯಾಖ್ಯಾನಿಸಿದೆ.
ಸಣ್ಣ ಕಂಪೆನಿಗಳ ಪಾವತಿಸಿದ ಬಂಡವಾಳವನ್ನು ಈ ಹಿಂದೆ ಇದ್ದ ಗರಿಷ್ಠ 2 ಕೋಟಿ ರೂ.ಗಳಿಂದ ಗರಿಷ್ಠ 4 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಜತೆಗೆ ಕಂಪೆನಿಯ ವಹಿವಾಟಿನ ಮಿತಿಯನ್ನು ಈ ಹಿಂದೆ ಇದ್ದ ಗರಿಷ್ಠ ಮಿತಿ 20 ಕೋಟಿ ರೂ.ಗಳಿಂದ ಗರಿಷ್ಠ ಮಿತಿ 40 ಕೋಟಿ ರೂ.ಗಳಿಗೆ ಏರಿಸಲಾಗಿದೆ.ಹಣಕಾಸು ವರದಿಯ ಭಾಗವಾಗಿ ನಗದು ಹರಿವಿನ ವರದಿ ಸಿದ್ಧಪಡಿಸುವುದರಿಂದ ಸಣ್ಣ ಕಂಪೆನಿಗಳಿಗೆ ವಿನಾಯಿತಿ ನೀಡಲಾಗಿದೆ. ಅದರ ಬದಲಾಗಿ ಸಂಕ್ಷಿಪ್ತ ವಾರ್ಷಿಕ ರಿಟರ್ನ್ ಸಲ್ಲಿಸಬಹುದು.