Advertisement

Kuno National Park; ಚೀತಾಗಳ ರೆಡಿಯೋ ಕಾಲರ್‌ ತೆರವು

08:23 PM Jul 17, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) 3 ದಿನಗಳ ಅಂತರದಲ್ಲಿ 2 ಚೀತಾಗಳು ಮೃತಪಟ್ಟ ಬೆನ್ನಲ್ಲೇ, ಕೆಎನ್‌ಪಿಯಲ್ಲಿರುವ ಎಲ್ಲಾ ಚೀತಾಗಳ ಕುತ್ತಿಗೆಯಿಂದ ರೇಡಿಯೋ ಕಾಲರ್‌ ತೆಗೆದುಹಾಕಲು ಆರಂಭಿಸಲಾಗಿದೆ.

Advertisement

ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ ಕಾರಣವಿರಬಹುದು ಎಂಬ ಶಂಕೆ ಮೂಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ಈ ಕುರಿತು ಮಧ್ಯಪ್ರದೇಶ ಅರಣ್ಯ ಸಂರಕ್ಷಣಾ ಅಧಿಕಾರಿ ಜೆ.ಸಿ. ಚೌಹಾಣ್‌ ಮಾಹಿತಿ ನೀಡಿದ್ದು, ಮಾನ್ಸೂನ್‌ ಕಾಲವಾಗಿರುವ ಹಿನ್ನೆಲೆ ರೇಡಿಯೋ ಕಾಲರ್‌ಗಳ ಅಳವಡಿಕೆಯಿಂದ ಚೀತಾಗಳ ಕುತ್ತಿಗೆಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ.

ಅವುಗಳ ಸಾವಿಗೂ ಅದೂ ಕಾರಣವಿರಬಹುದು. ಆದರೆ ಇದೇ ನಿಖರ ಕಾರಣ ಎನ್ನಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ರೇಡಿಯೋ ಕಾಲರ್‌ ತೆಗೆದುಹಾಕಲು ಆರಂಭಿಸಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next