Advertisement
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಸಮಾವೇಶದಲ್ಲಿ ಈ ವಿಚಾರದ ಕುರಿತು ಮಾಹಿತಿ ನೀಡಿರುವ ಅವರು, ಜಾಗತಿಕ ವ್ಯಾಪಾರ ದೃಷ್ಟಿಕೋನದಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳು ಪ್ರಾದೇಶಿಕ ವ್ಯವಹಾರಗಳಿಗೆ ಮಾನ್ಯತೆ ನೀಡುವುದು ಅಗತ್ಯವಾಗಿದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಈ ಹಿನ್ನೆಲೆ ವ್ಯವಹಾರ ಸುಲಭಗೊಳಿಸಲು ರಾಷ್ಟ್ರಗಳ ನಡುವಿನ ವಹಿವಾಟನ್ನು ರೂಪಾಯಿಗಳಲ್ಲಿ ಇತ್ಯರ್ಥಗೊಳಿಸುವುದು ಉತ್ತಮ ಆಯ್ಕೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಪರಿಸರ ಸ್ನೇಹಿ ಮೂಲಸೌಕರ್ಯಗಳ ಸ್ಥಾಪನೆಗಾಗಿ ರೂಪಿಸಿರುವ ಗ್ರೀನ್ ಬಾಂಡ್ ಯೋಜನೆಯ ಚೊಚ್ಚಲ ಬಾಂಡ್ ಅನ್ನು ಜನವರಿ 25 ಹಾಗೂ ಫೆಬ್ರವರಿ 9ರಂದು ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ತಿಳಿಸಿದೆ. ಜತೆಗೆ ಬಾಂಡ್‌ಗಳು ತಲಾ 8 ಸಾವಿರ ಕೋಟಿ ರೂ, ಮೌಲ್ಯದ್ದಾಗಿವೆ ಎಂದಿದೆ.