Advertisement

ಸರಕಾರ ಪಂಡಿತರು ಕಾಶ್ಮೀರಕ್ಕೆ ಮರಳುವ ವಾತಾವರಣ ಸೃಷ್ಟಿಸಲಿ’

11:53 PM Apr 09, 2022 | Team Udayavani |

ಮಂಗಳೂರು: 32 ವರ್ಷಗಳಿಂದ ತಮ್ಮ ಸ್ವಂತ ನೆಲದಿಂದ ದೂರವಾಗಿ ಎಲ್ಲೆಲ್ಲೋ ಬದುಕುತ್ತಿ ರುವ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳಿ ಹಿಂದಿನಂತೆ ಸಹಜ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜಕೀಯವಾಗಿ ಒಂದು ಪರಿಹಾರ ಹುಡುಕಬೇಕು ಎಂದು ರಂಗಕರ್ಮಿ, ಚಿಂತಕ ಹಾಗೂ ಕಾಶ್ಮೀರಿ ಫೈಲ್ಸ್‌ ಚಲನಚಿತ್ರದಲ್ಲಿ ನಟಿಸಿರುವ ಪ್ರಕಾಶ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳೂರು ಲಿಟ್‌ ಫೆಸ್ಟ್‌ ನ ನಾಲ್ಕನೇ ಆವೃತ್ತಿಯಲ್ಲಿ ಶನಿವಾರ ಜರಗಿದ “ಕಾಶ್ಮೀರ್‌ ಫೈಲ್ಸ್‌: ರೀಲ್‌ ಆ್ಯಂಡ್‌ ರಿಯಲ್‌’ ವಿಚಾರಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಂಡಿತರು ಮರಳಿ ಕಾಶ್ಮೀರಕ್ಕೆ ತೆರಳುವ ನಿಟ್ಟಿನಲ್ಲಿ ಅವಶ್ಯ ಕ್ರಮಗಳನ್ನು ಕೇಂದ್ರ ಕೈಗೊಳ್ಳಬೇಕು. ಮೋದಿ ನೇತೃತ್ವದ ಸರಕಾರದಿಂದ ಇದು ಸಾಧ್ಯ ಎಂಬ ಬಲವಾದ ನಂಬಿಕೆ ಅವರಲ್ಲಿದೆ ಎಂದರು.

ಇದನ್ನೂ ಓದಿ:ಅಮಿತ್‌ ಶಾ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಬೊಮ್ಮಾಯಿ

ಕಾಶ್ಮೀರಿ ಪಂಡಿತರು ತಮ್ಮ ಆಸ್ತಿಗಳನ್ನು ಇಟ್ಟುಕೊಳ್ಳು ತ್ತಾರೋ, ಮಾರುತ್ತಾರೋ ಅದು ಅವರಿಗೆ ಬಿಟ್ಟಿದ್ದು. ಅವರ ಆಸ್ತಿ ಮರಳಿಸಲು ಸಾಧ್ಯವಾದರೆ ಸರಿ. ಕೊಡಲು ಆಗದಿದ್ದರೆ ಅವರಿಗೆ ತಕ್ಕ ಪರಿಹಾರ ಕೊಡಬೇಕು. ಕಳೆದ 32 ವರ್ಷಗಳಿಂದ ಅವರು ಪಟ್ಟ ಕಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕು ಎಂದರು. ಸಹನಾ ವಿಜಯ ಕುಮಾರ್‌ ಗೋಷ್ಠಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next