Advertisement
ಮಾದರಿ ಶಾಲೆಶಾಲೆಯಲ್ಲಿ ಸುವರ್ಣ ಜಲ ಯೋಜನೆ, ಮಳೆ ನೀರು ಸಂಗ್ರ ಹಣೆ ಘಟಕ ನಿರ್ಮಿಸಲಾಗಿದೆ. ವಾಹನದ ವ್ಯವಸ್ಥೆ, ಉತ್ತಮ ಪೀಠೊಪಕರಣ, ಆಕರ್ಷಕ ಗೋಡೆ ಚಿತ್ತಾರ, ಸುಂದರ ಪ್ರಾಂಗಣ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಎಜುಸ್ಯಾಟ್, ಕಲಿಕಾ ಸಾಮಗ್ರಿಗಳ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಈ ಶಾಲೆಗೆ ಶಿರೂರು ಕರಾವಳಿ ಮೇಲ್ಪಂಕ್ತಿಯವರೆಗಿನ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಕರ ಮುತುವರ್ಜಿ ಹಾಗೂ ಶಿಕ್ಷಣಾಭಿಮಾನಿಗಳ ಪ್ರೋತ್ಸಾಹದಿಂದ 20 ಲಕ್ಷ ರೂ. ವೆಚ್ಚ ದಲ್ಲಿ ವಾಹನ ಖರೀದಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಕಳೆದ ವರ್ಷ 1ರಿಂದ 8ರ ವರೆಗೆ 232 ಮತ್ತು ಎಲ್ ಕೆಜಿಯಲ್ಲಿ 50 ವಿದ್ಯಾರ್ಥಿಗಳಿದ್ದರು.2020-21ನೇ ಸಾಲಿನಲ್ಲಿ ಒಂದನೇ ತರಗತಿಯಲ್ಲಿ 36 ವಿದ್ಯಾರ್ಥಿಗಳು, ಎರಡನೇ ತರಗತಿಯಲ್ಲಿ 33 ವಿದ್ಯಾರ್ಥಿ ಗಳಿದ್ದಾರೆ. ಈ ವರ್ಷ 1ನೇ ತರಗತಿಯಲ್ಲಿ 59, 2ನೇ ತರಗತಿಯಲ್ಲಿ 45, 3ನೇ ತರಗತಿಯಲ್ಲಿ 40, 4ನೇ ತರಗತಿಯಲ್ಲಿ 33, 5 ನೇ ತರಗತಿಯಲ್ಲಿ 24, 6ನೇ ತರಗತಿಯಲ್ಲಿ 44, 7ನೇ ತರಗತಿ ಯಲ್ಲಿ 42, 8ನೇ ತರಗತಿಯಲ್ಲಿ 10 ವಿದ್ಯಾಥಿಗಳಿದ್ದಾರೆ. ಶಾಲೆ ಯಲ್ಲಿ 10ನೇ ತರಗತಿ ಯವರೆಗೆ ಶಿಕ್ಷಣ ನೀಡುತ್ತಿದ್ದು ಒಟ್ಟು 370 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Related Articles
Advertisement
ಬೇಡಿಕೆಶಾಲೆಯಲ್ಲಿ ಆರು ತರಗತಿ ಕೋಣೆಗಳ ಕೊರತೆ ಇದೆ. ಪ್ರಯೋಗಾಲಯ, ಗ್ರಂಥಾಲಯ ಬೇಡಿಕೆ ಇದೆ. ಮಕ್ಕಳಿಗೆ ಬಾಲವನ, ಒಳಾಂಗಣ ಕ್ರೀಡಾಂಗಣದ ಅಗತ್ಯವಿದೆ. ಓರ್ವ ಶಿಕ್ಷಕರ ಕೊರತೆ
ಈ ಶಾಲೆಗೆ ಒಟ್ಟು ಹತ್ತು ಶಿಕ್ಷಕರ ಆವಶ್ಯಕತೆ ಇದ್ದು, ಪ್ರಸ್ತುತ ಎಂಟು ಖಾಯಂ ಹಾಗೂ ಒಬ್ಬರು ನಿಯೋಜಿತ ಅಧ್ಯಾಪಕರಿದ್ದಾರೆ. ಓರ್ವ ಶಿಕ್ಷಕರ ಕೊರತೆ ಇದೆ. ತರಗತಿ ಕೋಣೆಗಳು ಅಗತ್ಯ
ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಸೇವೆ ನೀಡಲಾಗುತ್ತಿದೆ. ಪ್ರಸ್ತುತ ಶಾಲೆಗೆ ತರಗತಿ ಕೋಣೆಗಳು ಅಗತ್ಯವಿದ್ದು ಅದನ್ನು ಒದಗಿಸಲು ಇಲಾಖೆ ಕ್ರಮ ವಹಿಸಬೇಕಿದೆ.
-ರವೀಂದ್ರ ಶೆಟ್ಟಿ ಹೊಸ್ಮನೆ, ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ ಗುಣಮಟ್ಟ ಹೆಚ್ಚಳ
ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಎಸ್.ಎಂ.ಡಿ.ಸಿ. ಮತ್ತು ಪಾಲಕರು ಎಲ್ಲ ಕಾರ್ಯಕ್ರಮಗಳಿಗೂ ಸೂಕ್ತ ಸಲಹೆ ಹಾಗೂ ಪ್ರೋತ್ಸಾಹ ನೀಡಿರುವುದರಿಂದ ಶಾಲೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಿದೆ. ಪ್ರಸ್ತುತ ಅಗತ್ಯ ಕೊಠಡಿಗಳು ಮಂಜೂರಾಗಬೇಕಿದೆ.
-ಶಂಕರ ಶಿರೂರು, ಮುಖ್ಯೋಪಾಧ್ಯಾಯರು ಅನುದಾನ ಅಗತ್ಯ
ಶಾಲೆಯು ಹೆತ್ತ ವರು ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರದಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ಹೊಂದಿದೆ. ಸರಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದರೆ ಶಾಲೆಗೆ ಅನುಕೂಲವಾಗುತ್ತದೆ.
-ಚಂದ್ರ ಶೇಖರ ಮೇಸ್ತ, ಎಸ್.ಡಿ.ಎಂ.ಸಿ. ಅಧ್ಯಕ್ಷ – ಅರುಣ ಕುಮಾರ್ ಶಿರೂರು