Advertisement
ಇವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ಕೈಗೊಂಡ ಅತೀ ಮಹತ್ವದ ಸುಧಾರಣಾ ಕ್ರಮಗಳು.
Related Articles
Advertisement
ಪ್ರೋತ್ಸಾಹ ಧನ:
ಆಟೋಮೊಬೈಲ್ ಕ್ಷೇತ್ರಕ್ಕೆ 26,058 ಕೋ.ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಘೋಷಿಸಿದೆ. ಇದು ಹೊಸ ಹೂಡಿಕೆದಾರರಿಗೂ ನೆರವಾಗಲಿದೆ. ಬ್ಯಾಟರಿ ಚಾಲಿತ ವಾಹನಗಳು, ಜಲಜನಕ ಇಂಧನ ಆಧಾರಿತ ಸೆಲ್ ವೆಹಿಕಲ್‌ಗಳಿಗೆ ಉತ್ತೇಜನದ ಜತೆಗೆ ಸುಧಾರಿತ ಆಟೋ ಮೋಟಿವ್ ತಂತ್ರಜ್ಞಾನ, ಸಿಕೆಡಿ- ಎಸ್‌ಕೆಡಿ ಕಿಟ್‌ಗಳನ್ನು ತಯಾರಿಗೂ ಪ್ರೋತ್ಸಾಹ ಸಿಗಲಿದೆ.
ಇದರಿಂದ ದೇಶ ಸಾಂಪ್ರದಾಯಿಕ ಇಂಧನ ವ್ಯವಸ್ಥೆ ಯಿಂದ ಪರಿಸರಸ್ನೇಹಿ ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡಲು ಸಾಧ್ಯವಾಗಲಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಉದ್ಯೋಗ ಸೃಷ್ಟಿಗೆ ಒತ್ತು :
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಪುಟ ಸಭೆ ಯಲ್ಲಿ ಆಟೋಮೊಬೈಲ್, ಆಟೋ ಬಿಡಿಭಾಗಗಳು ಹಾಗೂ ಡ್ರೋನ್ ಕ್ಷೇತ್ರಕ್ಕೂ ಕೇಂದ್ರ ಸರಕಾರ ಉತ್ಪಾ ದನೆ ಆಧಾರಿತ ಪ್ರೋತ್ಸಾಹ ಧನವನ್ನು ಘೋಷಿಸಿ 26,058 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಈ ಮೊತ್ತವನ್ನು ಉದ್ದಿಮೆಗಳಿಗೆ ನೀಡಲಾಗುತ್ತದೆ. ದೇಶದ ಉತ್ಪಾದನಾ ಜಿಡಿಪಿಯ
ಶೇ. 35ರಷ್ಟು ಪಾಲು ಆಟೋಮೊಬೈಲ್ ಕ್ಷೇತ್ರದ್ದಾಗಿರುವ ಕಾರಣ ಉದ್ಯೋಗ ಸೃಷ್ಟಿಗೆ ಭಾರೀ ಅನುಕೂಲವಾಗಲಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಅನುಕೂಲವೇನು? :
- ಸರಕಾರವೇ ಪ್ರೋತ್ಸಾಹ ಧನ ನೀಡುವುದರಿಂದ ಈ ಕ್ಷೇತ್ರಗಳಲ್ಲಿನ ಹಣಕಾಸಿನ ಅಭಾವ ತಗ್ಗಲಿದೆ
- ಆಟೋಮೋಟಿವ್ ತಂತ್ರಜ್ಞಾನಗಳಲ್ಲಿ ಸುಧಾರಣೆಗಳನ್ನು ಜಾರಿ ಮಾಡಲು, ಜಾಗತಿಕ ಮಟ್ಟದಲ್ಲಿ ಭಾರತದ ಉದ್ದಿಮೆಗಳು ಹೆಸರು ಮಾಡಲು ಈ ಯೋಜನೆ ನೆರವಾಗಲಿದೆ.
- ಆಟೋಮೊಬೈಲ್, ಆಟೋ ಬಿಡಿ ಭಾಗಗಳ ಕ್ಷೇತ್ರದಲ್ಲಿ 42,500 ಕೋಟಿ ರೂ. ಮೊತ್ತದ ಹೊಸ ಹೂಡಿಕೆಗಳು ಹರಿದುಬರಲಿವೆ. ರಫ್ತು ಪ್ರಮಾಣವೂ ಹೆಚ್ಚಾಗಲಿದೆ.
- ಸುಮಾರು60 ಲಕ್ಷ ಹೆಚ್ಚುವರಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
- ಸಾಂಪ್ರದಾಯಿಕ ಇಂಧನ ಆಧರಿತ ಆಟೋಮೊಬೈಲ್ ವ್ಯವಸ್ಥೆಯಿಂದ ಭಾರತವು ಪರಿಸರಸ್ನೇಹಿ, ಸುಸ್ಥಿರ, ಸ್ವತ್ಛ, ಸುಧಾರಿತ ಹಾಗೂ ದಕ್ಷ ವಿದ್ಯುತ್‌ಚಾಲಿತ ವಾಹನ ಆಧರಿತ ವ್ಯವಸ್ಥೆಗೆ ಪರಿವರ್ತನೆಯಾಗಲು ಸಾಧ್ಯ.
- ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿ 9 ರಚನಾ ತ್ಮಕ, 5 ನಿರ್ವಹಣಾತ್ಮಕ ಸುಧಾರಣೆಗಳಿಗೆ ಒಪ್ಪಿಗೆ
- ಎಜಿಆರ್(ಹೊಂದಾಣಿಕೆಯಾದ ಒಟ್ಟಾರೆ ಆದಾಯ) ವ್ಯಾಖ್ಯಾನದಲ್ಲಿ ಬದಲಾವಣೆ. ಟೆಲಿಕಾಂ ಕಂಪೆನಿಗಳ ದೂರಸಂಪರ್ಕೇತರ ಆದಾಯಕ್ಕೆ ಶುಲ್ಕ ಪಾವತಿಯಿಂದ ವಿನಾಯಿತಿ
- ಎಲ್ಲ ಟೆಲಿಕಾಂ ಕಂಪೆನಿಗಳಿಗೂ ಎಜಿಆರ್ ಬಾಕಿ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ.
- ತರಂಗಾಂತರ (ಸ್ಪೆಕ್ಟ್ರಂ) ಹಂಚಿಕೆ ಮುಕ್ತ
- ದೂರಸಂಪರ್ಕ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಬಂಡವಾಳ(ಆಟೋಮ್ಯಾಟಿಕ್)ಕ್ಕೆ ಅನುಮತಿ
- ಎಲ್ಲ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಅರ್ಜಿಗಳ ಡಿಜಿಟಲೀಕರಣ.
- ಪೋಸ್ಟ್‌ಪೇಯ್ಡನಿಂದ ಪ್ರೀಪೇಯ್ಡಗೆ ಅಥವಾ ಪ್ರೀಪೇಯ್ಡನಿಂದ ಪೋಸ್ಟ್‌ಪೇಯ್ಡಗೆ ಬದಲಾಗಬೇಕೆಂದಿದ್ದರೆ, ಗ್ರಾಹಕರು ಪ್ರತ್ಯೇಕ ಕೆವೈಸಿ ಪ್ರಕ್ರಿಯೆಗೆ ಒಳಗಾಗಬೇಕಾದ ಅಗತ್ಯವಿಲ್ಲ.