Advertisement
ಕ್ಯಾನ್ಸರ್, ಮಧುಮೇಹ, ಹೃದ್ರೋಗ ಸಂಬಂಧಿ ಔಷಧಗಳು ಸೇರಿದಂತೆ ಹಲವು ಮೆಡಿಸಿನ್‌ಗಳ ಬೆಲೆಯನ್ನು ಶೇ.70ರವರೆಗೆ ಇಳಿಕೆ ಮಾಡುವ ಪ್ರಸ್ತಾಪ ವನ್ನು ಸಲ್ಲಿಸಲಾಗಿದೆ. ಜತೆಗೆ, ಹೆಚ್ಚು ಬಳಕೆಯಲ್ಲಿರುವ ಔಷಧಗಳನ್ನೂ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ(ಎನ್‌ಎಲ್‌ಇಎಂ)ಗೆ ಸೇರ್ಪಡೆ ಮಾಡಲು ಚಿಂತನೆ ನಡೆಸಲಾಗಿದೆ. ಇದೇ 26ರಂದು (ಮಂಗಳವಾರ) ಫಾರ್ಮಾ ವಲಯದ ಪ್ರತಿನಿಧಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಸಭೆ ಕರೆದಿದ್ದು, ಔಷಧಗಳ ದರ ಇಳಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಈ ಪಟ್ಟಿಯಲ್ಲಿರುವ 355 ಔಷಧಗಳ ಮಾರಾಟದ ದರಕ್ಕೆ ಮಿತಿ ಹೇರಲಾಗಿದ್ದು, ಇದಕ್ಕೆ ಅನುಗುಣವಾಗಿಯೇ ಮಾರಾಟಗಾರರು ಔಷಧ ಮಾರಬೇಕಾಗುತ್ತದೆ.
- ಕೆಲವು ಪ್ರಮುಖ ಔಷಧಗಳ ದರ ವನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು
- ಅದರಂತೆ, ಇಂಥ ಔಷಧಗಳ ದರಗ ಳನ್ನು ಶೇ.70ರವರೆಗೆ ತಗ್ಗಿಸುವುದು
- ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ 2015ಕ್ಕೆ ತಿದ್ದುಪಡಿ ತಂದು, ಹೆಚ್ಚು ಬಳಕೆಯಲ್ಲಿರುವ ಕೆಲವು ಔಷಧಗಳನ್ನು ಈ ಪಟ್ಟಿ ಸೇರಿಸುವುದು
- ರೋಗಿಗಳು ದೀರ್ಘಾವಧಿ ಬಳಸುವಂಥ ಔಷಧಗಳ ಮೇಲೆ ಮಾರಾಟಗಾರರು ಹೆಚ್ಚಿನ ಲಾಭ ಇಟ್ಟುಕೊಳ್ಳದಂತೆ ಗರಿಷ್ಠ ದರಕ್ಕೆ ಮಿತಿ ಹೇರುವುದು