Advertisement

ಸಿಐಸಿ ಅಧಿಕಾರಾವಧಿ 3 ವರ್ಷ ಮಾತ್ರ: ಆರ್‌ಟಿಐ ಅಧಿಸೂಚನೆ

12:31 AM Oct 26, 2019 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಇರುವ ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ಈಗಿರುವ 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲಾಗಿದ್ದು, ಅವರಿಗೆ ನೀಡಲಾಗುವ ವೇತನ ಹಾಗೂ ಇತರೆ ಭತ್ಯೆಗಳನ್ನು ಇನ್ನು ಮುಂದೆ ಕೇಂದ್ರ ಸರಕಾರವೇ ನಿರ್ಧರಿಸಲಿದೆ. ಆರ್‌ಟಿಐ ಕಾಯ್ದೆಗೆ ತಂದ ತಿದ್ದುಪಡಿಯ ಅನ್ವಯ ಹೊಸ ಆರ್‌ಟಿಐ ನಿಯಮಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಗುರುವಾರ ರಾತ್ರಿ ಪ್ರಕಟಿಸಲಾಗಿದೆ.

Advertisement

ಮಾಹಿತಿ ಹಕ್ಕು ಕಾಯ್ದೆ 2005ರಂತೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ದೇಶಾದ್ಯಂತ ಇರುವ ಇತರೆ ಮಾಹಿತಿ ಆಯುಕ್ತರು ಈವರೆಗೆ ಕೇಂದ್ರ ಚುನಾವಣ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರ ಮಾದರಿಯಲ್ಲೇ ಸೇವಾವಧಿ ಮತ್ತು ಇತರೆ ಸ್ವಾಯತ್ತ ಅಧಿಕಾರವನ್ನು ಹೊಂದಿದ್ದರು. ಆದರೆ, ಕೇಂದ್ರ ಸರಕಾರ ಜುಲೈನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರಂತೆ ಈಗ ಆಯುಕ್ತರ ಸೇವಾವಧಿ 3 ವರ್ಷಗಳಿಗೆ ಕಡಿತಗೊಳಿಸಲಾಗಿದೆ. ಜತೆಗೆ, ಅವರ ವೇತನ ಮತ್ತಿತರ ಭತ್ಯೆಗಳನ್ನು ನಿರ್ಧರಿಸುವುದು ಕೇಂದ್ರದ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ. ಇದೇ ವೇಳೆ, ಕೇಂದ್ರ ಸರಕಾರದ ಈ ಕ್ರಮವು ತಮ್ಮ ಸ್ವಾತಂತ್ರ್ಯ ಹಾಗೂ ಸ್ವಾಯತ್ತೆಯ ಮೇಲಿನ ಹಲ್ಲೆ ಎಂದು ಆರ್‌ಟಿಐ ಹೋರಾಟಗಾರರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next