Advertisement

ಆರ್‌ಬಿಐ ಕಾರ್ಯ ವಿಧಾನ ಬದಲಾವಣೆಗೆ ಸರಕಾರದ ಚಿಂತನೆ

07:11 PM Nov 28, 2018 | udayavani editorial |

ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕಿನ ಕಾರ್ಯ ವಿಧಾನವನ್ನು ಬದಲಾಯಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

Advertisement

ಡಿ.14ರಂದು ನಡೆಯುವ ಸರಕಾರದ ಜತೆಗಿನ ಸಭೆಯಲ್ಲಿ  ಈ ವಿಷಯ ಮತ್ತೆ ಚರ್ಚೆಗೆ ಬರಲಿದ್ದು ಸರಕಾರ ಆರ್‌ಬಿಐ ಕಾರ್ಯ ವಿಧಾನವನ್ನು ಬದಲಾಯಿಸುವ ದಿಶೆಯಲ್ಲಿ ಒತ್ತಡ ತರಲಿದೆ ಎಂದು ವರದಿಗಳು ಹೇಳಿವೆ. 

ಕಳೆದ ನ.19ರ ಸಭೆಯಲ್ಲೇ ಈ ವಿಷಯ ಚರ್ಚೆಗೆ ಬಂದಿತ್ತು. ಆದರೆ ಈ ಬಗ್ಗೆ ನಿಖರ ಚರ್ಚೆಯನ್ನು ಮುಂದಿನ (ಡಿ.14) ಸಭೆಯಲ್ಲಿ ಚರ್ಚಿಸುವುದೆಂದು ಒಪ್ಪಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಆರ್‌ಬಿಐ ನಿರ್ದೇಶಕರ ಮಂಡಳಿಯಲ್ಲಿ 18 ಸದಸ್ಯರಿದ್ದು ಇವರಲ್ಲಿ ಸರಕಾರದ ನಾಮಿನಿಗಳೂ ಇದ್ದಾರೆ. ಸರಕಾರದ ಹಾಗೇ ಆರ್‌ಬಿಐ ಮಂಡಳಿ ಸದಸ್ಯರು ಕೂಡ ಆರ್‌ಬಿಐ ಕಾರ್ಯ ವೈಖರಿಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕೆಂದು ಬಯಸುತ್ತಾರೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next