Advertisement

Tax; ಸಣ್ಣ ಪ್ರಮಾಣದ ತೆರಿಗೆ ಅಪರಾಧ 100 ದಿನದಲ್ಲಿ ಶಿಕ್ಷೆಯಿಂದ ಮುಕ್ತ?

09:35 PM Jun 11, 2024 | Team Udayavani |

ನವದೆಹಲಿ: ಬಹು ದಿನಗಳ ಬೇಡಿಕೆಯಾಗಿದ್ದ ಸಣ್ಣ ಪ್ರಮಾಣದ ತೆರಿಗೆ ಅಪರಾಧಗಳನ್ನು ಶಿಕ್ಷೆಯಿಂದ ಹೊರಗಿಡುವ ನಿರ್ಧಾರವನ್ನು ಕೇಂದ್ರ ಸರ್ಕಾರ 100 ದಿನಗಳಲ್ಲಿ ಕೈಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಆದಾಯ ತೆರಿಗೆ ಸಂಬಂಧಿಸಿದಂತಹ ಸಣ್ಣ ಪ್ರಮಾಣದ ಅಪರಾಧಗಳು ಇದರ ವ್ಯಾಪ್ತಿಗೆ ಬರಲಿವೆ. ಇತರ ಕಾನೂನು ಕ್ರಮಗಳ ಬದಲಿಗೆ ಈ ಅಪರಾಧಗಳಿಗೆ ಕೇವಲ ದಂಡ ವಿಧಿಸಲು ನಿರ್ಧರಿಸಲಾಗಿದೆ. “100 ದಿನಗಳಲ್ಲಿ ಸರ್ಕಾರ ವ್ಯವಹಾರಗಳನ್ನು ಸರಳಗೊಳಿಸುವತ್ತ ನಿರ್ಧಾರಗಳನ್ನು ಕೈಗೊಳ್ಳಲಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರಲಾಗುತ್ತದೆ. ಈ ಮೂಲಕ ಸಣ್ಣ ಪ್ರಮಾಣದ ತೆರಿಗೆ ಅಪರಾಧಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸಲಾಗುತ್ತದೆ. ಈ ಬಗ್ಗೆ ಸರ್ಕಾರದಲ್ಲಿ ಆಂತರಿಕವಾಗಿ ಚರ್ಚೆಗಳನ್ನು ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಸ್ತುತ ಇರುವ ಕಾನೂನಿನ ಪ್ರಕಾರ ಎಲ್ಲಾ ಮಾದರಿಯ ತೆರಿಗೆ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಟಿಡಿಎಸ್‌ ತಡ ಮಾಡುವಂತಹ ಅಪರಾಧಗಳಿಗೆ ಸುಮಾರು ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸಬಹುದಿತ್ತು. ಅಲ್ಲದೇ ಕಂಪನಿಯ ನಿರ್ದೇಶಕನನ್ನು ಅಪರಾಧಿ ಎಂದು ಗುರುತಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next