Advertisement

ಲೈಫ್ ಸರ್ಟಿಫಿಕೇಟ್‌ಗೆ ಪರ್ಯಾಯ ತಂತ್ರಜ್ಞಾನ; ಜಿತೇಂದ್ರ ಸಿಂಗ್‌

10:55 PM Nov 29, 2021 | Team Udayavani |

ನವದೆಹಲಿ: ಪಿಂಚಣಿದಾರರು ಪ್ರತಿ ವರ್ಷ ತಾವು ಪಿಂಚಣಿ ಪಡೆಯುವ ಬ್ಯಾಂಕಿಗೆ ಹೋಗಿ ಜೀವನ ಪ್ರಮಾಣಪತ್ರಕ್ಕೆ (ಲೈಫ್ ಸರ್ಟಿಫಿಕೇಟ್‌) ಸಹಿ ಹಾಕುವುದು ಕಡ್ಡಾಯವಾಗಿದ್ದು, ಇದನ್ನು ಮತ್ತಷ್ಟು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ, ಫೇಸ್‌ ರೆಕಾಗ್ನಿಷನ್‌(ಮುಖ ಗುರುತು) ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಲೈಫ್ ಸರ್ಟಿಫಿಕೇಟ್‌ಗೆ ಸಹಿ ಹಾಕುವ ಪದ್ಧತಿಗೆ ಪರ್ಯಾಯವಾಗಿ ಇದನ್ನು ಬಳಸಬಹುದು.

Advertisement

ಈ ಸೇವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕೇಂದ್ರ ಸಿಬ್ಬಂದಿ ಇಲಾಖೆಯ ಸಹಾಯಕ ಸಚಿವರಾದ ಜಿತೇಂದ್ರ ಸಿಂಗ್‌, ಇದೊಂದು ವಿಶೇಷವಾದ ತಂತ್ರಜ್ಞಾನವಾಗಿದ್ದು, ಇದರಿಂದ ಕೇಂದ್ರ ಸರ್ಕಾರದ 68 ಲಕ್ಷ ಪಿಂಚಣಿದಾರರಿಗೆ ಸಹಾಯವಾಗಲಿದೆ. ಅವರಿಗಷ್ಟೇ ಅಲ್ಲದೆ, ಇಪಿಎಫ್ಒ ಖಾತೆದಾರರಿಗೆ ಹಾಗೂ ರಾಜ್ಯ ಸರ್ಕಾರಗಳ ಪಿಂಚಣಿದಾರರಿಗೂ ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದೆ ಮತ್ತಷ್ಟು ಸೇವೆ:
ಸದ್ಯದಲ್ಲೇ ಇ-ಪಿಪಿಒ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಇದರ ಪ್ರಮಾಣಪತ್ರವು ಡಿಜಿಲಾಕರ್‌ನಲ್ಲಿ ಲಭ್ಯವಾಗುವಂತೆ ಮಾಡಲೂ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಇದಲ್ಲದೆ, ಪಿಂಚಣಿದಾರರ ಜಾಗೃತಿಗಾಗಿ ಇ-ಬುಕ್‌ಲೆಟ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇವನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ಯು ಟ್ಯೂಬ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಹೆಚ್ಚು ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next