ವಿಜಯಪುರ: ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರಕ್ಕೆ ಸೈನಿಕ ಶಾಲೆಯ ಆವರಣದಲ್ಲೇ ಸರ್ಕಾರಿ ಸಕಲ ಗೌರವ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಹೇಳಿದ್ದಾರೆ.
ಸೈನಿಕ ಶಾಲೆಯಿಂದ ಶ್ರಿಗಳ ಅಂತಿಮ ಯಾತ್ರೆಯ ಮೆರವಣಿಗೆ ವೇಳೆಯಲ್ಲೇ 20 ಬಸ್ ಗಳಲ್ಲಿ ಗಣ್ಯರನ್ನು ಅಂತಿಮ ಕ್ರಿಯಾ ಕರ್ಮ ನಡೆಯುವ ಜ್ಞಾನ ಯೋಗಾಶ್ರಮಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ.
ಜ್ಞಾನ ಯೋಗಾಶ್ರಮದಲ್ಲಿ ಸ್ಥಳದ ಅಭಾವದ ಹಿನ್ನೆಲೆಯಲ್ಲಿ ನೂರಾರು ಗಣ್ಯರು ಆಗಲಿಸಿದರೆ ವಾಹನ ನಿಲುಗಡೆ ಸಮಸ್ಯೆ ಆಗಲಿದೆ. ಹೀಗಾಗಿ ಸೈನಿಕ ಶಾಲೆ ಆವರಣದಿಂದಲೇ ಗಣ್ಯರನ್ನು ಬಸ್ ಗಳಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ನಿಲ್ಲಿಸಿದ್ದ ಕಾರಿಗೆ 2 ಟ್ರಕ್, ಬಸ್ ಢಿಕ್ಕಿ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ
ಅಂತಿಮ ಕ್ರಿಯಾವಿಧಿ ನಡೆಯುವ ಜ್ಞಾನ ಯೋಗಾಶ್ರಮದ ಪರಿಸರದಲ್ಲಿ ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಮಠಾಧೀಶರು, ಆಯ್ದ ಗಣ್ಯರಿಗೆ ಮಾತ್ರ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಅಂತ್ಯಕ್ರಿಯೆ ವೇಳೆ ವೇಳೆ ಆಶ್ರಮಕ್ಕೆ ಆಗಮಿಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ತಿಳಿಸಿದ್ದಾರೆ.
ಸೈನಿಕ ಶಾಲೆ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರದ ದರ್ಶನ ನಡೆಯುತ್ತಿದ್ದರೆ, ಇತ್ತ ಅಗ್ನಿ ಸ್ಪರ್ಶದ ಮೂಲಕ ಮಠಾಧೀಶರು ಅಂತಿಮ ವಿಧಿವಿಧಾನ ನಡೆಸಲು ಜ್ಞಾನ ಯೋಗಾಶ್ರಮದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.